ಸಂಪನ್ನಗೊಂಡ 3 ದಿನದ ನವಚಂಡಿ ಹೋಮ

ಸಿರವಾರ.ನಂ.14- ಲೋಕ ಕಲ್ಯಾಣಕ್ಕಾಗಿ ಹಾಗೂ ಕೊರೊನಾ ವೈರಸ್ ನಿವಾರಣೆಗಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ನವಚಂಡಿ ಹೋಮ ಸಂಪನ್ನಗೊಂಡಿತು.
ಪಟ್ಟಣದ ಅಂಚೇ ಕಚೇರಿ ರಸ್ತೆಯಲ್ಲಿರುವ ದೇವಿ ಮನೆಯಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ಪೂಜಾ ಕೈಂಕಾರ್ಯಗಳು ಜರುಗಿದವು. ಗುರುವಾರ ಗೋಪೂಜೆ, ಗಣಪತಿ ಪೂಜೆ, ಅಗ್ನಿ ಪ್ರತಿಷ್ಠಾಪನಾ ಚಂಡಿ, ಲಕ್ಷ್ಮೀ ಗಣಪತಿ ಹೋಮ, ಶುಕ್ರವಾರ ರುದ್ರಹೋಮ, ದುರ್ಗಾ ಕ್ಯಾತ್ಯಾಯನಿ ಹೋಮ, ಇಂದು (ಶನಿವಾರ) ನವ ಚಂಡಿಹೋಮ ಮಹಾಪೂರ್ಣಾಹುತಿ ನಂತರ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.