ಸಂಪನ್ನಗೊಂಡ ಶನೇಶ್ವರಸ್ವಾಮಿಯ ಕಾರ್ತೀಕ ದೀಪೋತ್ಸವ


ಚಿತ್ರದುರ್ಗ.ನ.೨೯: ನಗರದ ಐಯುಡಿಪಿ ಲೇಔಟ್ ಮೇಲ್ಬಾಗ ಕೆಹೆಚ್‌ಬಿ ಕಾಲೋನಿ ಸೂರ್ಯಪುತ್ರ ನಗರದಲ್ಲಿ ಶನೇಶ್ವರಸ್ವಾಮಿ ಲೋಕಕಲ್ಯಾಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಶ್ರೀ ಶನೇಶ್ವರ ಸ್ವಾಮಿಯ ಕಾರ್ತಿಕ ದೀಪೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಹರಿದು ಬಂದಿದ್ದ ಜನಸಾಗರ ಶ್ರೀ ಶನೇಶ್ವರ ಸ್ವಾಮಿ ಮತ್ತು ಪತ್ನಿ ಜೇಷ್ಠ ದೇವಿಯ ಹೂವಿನ ಅಲಂಕಾರ, ಕೆಂಡಾರ್ಚನೆ, ಶಿವನ ಅವತಾರದಲ್ಲಿ ವೀರಗಾಸೆಯ ನೃತ್ಯಗಳನ್ನು ಕಣ್ತುಂಬಿಕೊಂಡು ಪುನೀತರಾದರು.ವಿಶೇಷವಾಗಿ ಪ್ರತಿವರ್ಷದಂತೆ ಕೆಂಡವನ್ನು ತುಳಿಯುವ ಮಹಿಳಾ ಭಕ್ತರು, ಮತ್ತು ಮಹಾಮಂಗಳಾರತಿ ಪ್ರಸಾದ ವಿನಿಯೋಗ ಎಲ್ಲವೂ ಕೂಡ ಸಂಪ್ರದಾಯದಂತೆ ನಡೆಯಿತು.