ಸಂಪತ್ತು ಸಮಾಜದ ಒಳಿತಿಗಾಗಿ ವಿನಿಯೋಗಿಸಿ: ಬಿಜಾಸ್ಪುರ

ಕಲಬುರಗಿ,ಡಿ.20-ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ಬಹು ಮುಖ್ಯವಾಗಿ ನಾವು ಸಮಾಜಕ್ಕೆ ಯಾವ ಕೊಡುಗೆ ಕೊಡಬೇಕಾಗಿದೆ ಎನ್ನುವ ಸೇವಾ ಮನೋಭಾವನೆ ನಮ್ಮ ದೈನಂದಿನ ಬದುಕಿನ
ಭಾಗವಾಗಬೇಕೆಂದು ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಬಿಜಾಸ್ಪುರ ಗ್ರೂಪ್‍ನ ನಿರ್ದೇಶಕÀ ಪ್ರಶಾಂತ ಬಿಜಾಸ್ಪುರ ಹೇಳಿದರು.
ನಗರದ ಅಂಧ ಬಾಲಕರ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ ಸರ್ವೋದಯ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತಾನಾಡಿದರು.
ನಮ್ಮ ಬದುಕಿನ ಬಹು ಮುಖ್ಯ ಚಟುವಟಿಕೆಗಳಾದ ಕಲಿಕೆ, ಗಳಿಕೆ ಮತ್ತು ಸಮಾಜ ಸೇವೆ ಎನ್ನುವ ತತ್ವಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಸಂಪತ್ತನ್ನು ಗಳಿಸುವುದರ ಜೊತೆಗೆ ಸಮಾಜದ ಅಂಚಿನಲ್ಲಿರುವ ಮತ್ತು ವಂಚನೆಗೊಳಗಾಗಿರುವ ನೊಂದ ಜನರಿಗೆ ನೆರವಿನ ಸಹಾಯಹಸ್ತ ಚಾಚುವುದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು. ನಮ್ಮಲ್ಲಿರುವ ಸಂಪತ್ತನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಬೇಕು. ವಿಕಲಚೇತನರಲ್ಲಿರುವ ಸೂಪ್ತ ಸಾಮಥ್ರ್ಯವನ್ನು ಸಮರ್ಥವಾಗಿ ಸದ್ಬಳಕೆ ಮಾಡುವುದರ ಮೂಲಕ ಸಮ-ಸಮಾಜ ನಿರ್ಮಾಣ ಮಾಡಲು ಕಟಿಬದ್ಧರಾಗಲು ಕರೆ ನೀಡಿದರು.
ಅಂಗವಿಕಲರ ಬಗ್ಗೆ ಅನುಕಂಪ ಬೇಡ ಅವಕಾಶ ಕಲ್ಪಿಸಿಕೊಟ್ಟಾಗ ಮಾತ್ರ ಸಶಕ್ತರಾಗಲು ಸಾಧ್ಯ ಎಂದರು. ಇದೆ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಪರಿಣಾಮಕಾರಿ ಕಲಿಕೆಗೆ ಅನುಕೂಲವಾಗಲೆಂದು ಐ ಪ್ಯಾಡ್‍ಗಳನ್ನು
ವಿತರಿಸಲಾಯಿತು.
ಖ್ಯಾತ ಚಿಂತಕ ಪ್ರೊ.ಆರ್.ಕೆ ಹುಡಗಿ ಮಾತನಾಡಿ, ಜನರಿಗೆ ಕಣ್ಣಿದ್ದರು ಸಮಾಜವನ್ನು ಸರಿಯಾಗಿ ನೋಡುವ ದೃಷ್ಟಿ ಇರುವುದಿಲ್ಲ. ಆದರೆ ಕಣ್ಣಿಲ್ಲದವರು ಜಗತ್ತನ್ನು ಒಳಗಣ್ಣಿನಿಂದ ನೋಡುವ ದೃಷ್ಟಿಕೋನವನ್ನು ಬೆಳಸಿಕೊಳ್ಳಬೇಕೆಂದರು. ಅಶಕ್ತರಿಗೆ ದಯೆ, ಕರುಣೆ, ಪ್ರೀತಿ ಮತ್ತು ಅನುಕಂಪ ಮುಂತಾದ ಮಾನವೀಯ ಮೌಲ್ಯಗಳನ್ನು ಸಮಾಜದ ಪ್ರತಿಯೊಬ್ಬರು ತೋರಿಸಬೇಂದರು. ಜೊತೆಗೆ ಜನರೊಂದಿಗೆ ಸಾವಯವ ಸಂಬಂಧವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು. ಮಾನವೀಯತೆಯ ನೆಲೆಗಟ್ಟಿನ ಆಧಾರದ ಮೇಲೆ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಕಿವಿಮಾತು ಹೇಳಿದರು. ಸೇವೆಯ ಮೂಲಕ ಸರ್ವರ ಉದಯವನ್ನು ಸಾಧಿಸುವ ಸದಾಶಯದೊಂದಿಗೆ ಸರ್ವೋದಯ ಟ್ರಸ್ಟ ಉದಯವಾಗಿರುವದು ಸಂತೋಷದ ಸಂಗತಿ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ರಮೇಶ ಲಂಡನಕರ್ ಅವರು ಹೇಳಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಕೊರತೆಯ ಮಧ್ಯೆ ಅಸಾಧ್ಯವಾದದ್ದನ್ನು ಸಾಧಿಸಲು ಪ್ರೇರೆಪಿಸಬೇಕೆಂದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳೂ ಹಾಗೂ ಅಂಧ ಬಾಲಕರ ಪ್ರೌಢ ಶಾಲೆಯ ಪ್ರಭಾರ
ಅಧೀಕ್ಷ ಸಾದಿಕ ಹುಸೇನ್ ಖಾನ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಜೊತೆಗೆ ಸರಕಾರಿ ಸ್ವಾಯತ್ತಾ ಕಾಲೇಜಿನ ರಾಜ್ಯಶಾಸ್ತ್ರದ ಪ್ರಾಧ್ಯಾಪಕÀ ಡಾ.ಶ್ರೀಮಂತ ಹೋಳಕರ ಅವರೂ ಸಹ
ಮಾತನಾಡಿದರು. ಟ್ರಸ್ಟ್ ಕಾರ್ಯದರ್ಶಿ ರಾಜು ದೋಟಿಕೊಳ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಸಂಗೀತಾ ಸೈದಾಪೂರ ವಹಿಸಿದರು. ಜಗದೀಶ ನಾಯಕ ಮತ್ತು ಸಂಗಡಿದರು ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಡಾ.ಶರಣಪ್ಪ ಸೈದಾಪೂರ ಕಾರ್ಯಕ್ರಮನ್ನು ನಿರೂಪಿಸಿ, ವಂದಿಸಿದರು. ಶಾಲೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು.