ಸಂಪತ್ತಿನ ಮರು ಹಂಚಿಕೆ ಸುಪ್ರೀಂ ಕೇಂದ್ರದ ನಿಲುವು ಸ್ಪಷ್ಟನೆ

ನವದೆಹಲಿ,ಮೇ.೧-ಸಂಪತ್ತಿನ ಮರುಹಂಚಿಕೆ ಕುರಿತು ಹೆಚ್ಚುತ್ತಿರುವ ಚರ್ಚೆಯ ನಡುವೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್ ಗೆ ಕೇಂದ್ರದ ನಿಲುವು ಸ್ಪಷ್ಟಪಡಿಸಿದ್ದಾರೆ
“ಆರ್ಟಿಕಲ್ ೩೯ (ಬಿ) ಆಧಾರಿತ ಶಾಸನ ಒಂದು ನಿರ್ದಿಷ್ಟ ಸಮುದಾಯ, ಜನಾಂಗ ಅಥವಾ ಜಾತಿಯ ಜನರ ಒಡೆತನದ ಆಸ್ತಿಯನ್ನು ಮತ್ತೊಂದು ವರ್ಗದ ನಾಗರಿಕರಿಗೆ ವಿತರಿಸಲು ಅಥವಾ ಕಸಿದುಕೊಳ್ಳಲು ಉದೇಶ ಹೊಂದಿಲ್ಲ ಎಂದಿದ್ದಾರೆ.
ಸಂವಿಧಾನದ ೩೯(ಬಿ) ವಿಧಿ ಸಮುದಾಯದ ವಸ್ತು, ಸಂಪನ್ಮೂಲಗಳ ವಿತರಣೆಯನ್ನು ಸಾಮಾನ್ಯ ಒಳಿತಿಗಾಗಿ ಉದ್ದೇಶಿಸಿದೆ ಎಂದು ತುಷಾರ್ ಮೆಹ್ತಾ ಅವರು ಮುಖ್ಯನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಪೀಠದ ಮುಂದೆ ಈ ವಿಷಯ ತಿಳಿಸಿದ್ದಾರೆ.
ಪ್ರತಿ ನಾಗರಿಕನ ಸಂಪತ್ತನ್ನು ಒಟ್ಟುಗೂಡಿಸಿ ನಂತರ ಅದನ್ನು ನಿರ್ದಿಷ್ಟ ವರ್ಗಕ್ಕೆ ಬದಲಾಗಿ ಇಡಿ ದೇಶಕ್ಕೆ ಸಮಾನವಾಗಿ ವಿತರಿಸುವ ಗುರಿಯನ್ನು ಕೇಂದ್ರದ ಉದ್ದೇಶ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಯಲ್ಲಿ ಉದ್ಯೋಗ ಕಳೆದುಕೊಂಡ ೨೫,೦೦೦ ಕ್ಕೂ ಹೆಚ್ಚು ಶಾಲಾ ನೇಮಕಾತಿದಾರರು ಏಪ್ರಿಲ್ ಸಂಬಳ ಪಡೆಯುತ್ತಾರೆ. ಇಂತಹ ವಿಚಾರಗಳು ಆರ್ಥಿಕ ಅಭಿವೃದ್ಧಿ, ಆಡಳಿತ, ಸಮಾಜ ಕಲ್ಯಾಣ ಮತ್ತು ರಾಷ್ಟ್ರದ ತಿಳುವಳಿಕೆಯ ಕೊರತೆಯನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.
ಒಂದು ಜಮೀನು ಒಬ್ಬ ವ್ಯಕ್ತಿಗೆ ಸೇರಿದ್ದರೆ ಮತ್ತು ದೊಡ್ಡ ಪ್ರದೇಶದ ನಿವಾಸಿಗಳ ಸಾಮಾನ್ಯ ಒಳಿತಿಗಾಗಿ ರಸ್ತೆ ನಿರ್ಮಾಣಕ್ಕೆ ಅಗತ್ಯವಿದ್ದರೆ, ಖಾಸಗಿ ಮಾಲೀಕತ್ವದ ಭೂಮಿಯನ್ನು ಹೆಚ್ಚಿನ ಒಳಿತಿಗಾಗಿ ಬಳಸಿಕೊಳ್ಳಲು ವಸ್ತು ಸಂಪನ್ಮೂಲ ಎಂದು ವರ್ಗೀಕರಿಸಲಾಗುವುದು ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.
ಮುಖ್ಯನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಬಿವಿ ನಾಗರತ್ನ, ಎಸ್ ಧುಲಿಯಾ, ಜೆಬಿ ಪರ್ದಿವಾಲಾ, ಮನೋಜ್ ಮಿಶ್ರಾ, ಆರ್ ಬಿಂದಾಲ್, ಎಸ್ ಸಿ ಶರ್ಮಾ ಮತ್ತು ಎಜಿ ಮಸಿಹ್ ಅವರನ್ನೊಳಗೊಂಡ ಪೀಠದ ಮುಂದೆ ಕೇಂದ್ರ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ
“ಆರ್ಥಿಕ ಅಭಿವೃದ್ಧಿಯ ಡೈನಾಮಿಕ್ಸ್ ೧೯೯೦ ರ ದಶಕದಿಂದ ಸಮಾಜವಾದಿ ಮಾದರಿಯಿಂದ ಮುಕ್ತ ಮಾರುಕಟ್ಟೆ ಆರ್ಥಿಕತೆಗೆ ಬದಲಾಗಿದೆ ಮತ್ತು ಈಗ ಖಾಸಗಿ ಹೂಡಿಕೆಗಳು ಪ್ರಮುಖವಾಗಿವೆ. ಉತ್ಪಾದಕ ಆರ್ಥಿಕತೆಯನ್ನು ಹೊಂದಲು ಬಯಸಿದರೆ, ಖಾಸಗಿ ಹೂಡಿಕೆ ಪೊ?ರೀತ್ಸಾಹಿಸಬೇಕು. ೧೯೫೦ ರ ದಶಕದಲ್ಲಿ, ಖಾಸಗಿ ಪಕ್ಷಗಳಿಂದ ವಿದ್ಯುತ್ ವಿತರಿಸಲಾಗುವುದು ಎಂದು ಯಾರೂ ಊಹಿಸಿರಲಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ, ಸಮುದಾಯ ಸಂಪನ್ಮೂಲಗಳು ಎಲ್ಲಾ ಖಾಸಗಿ ಆಸ್ತಿಗಳನ್ನು ಒಳಗೊಂಡಿವೆ ಎಂದು ವಾದಿಸುವುದು ಅತ್ಯಂತ ಅನ್ಯಾಯವಾಗಿದೆ, ”ಎಂದು ಹೇಳಿದ್ದಾರೆ.