ಸಂಧ್ಯಾವಂದನೆ ಶಿಬಿರದ ಮಹತ್ವ ಅರಿತುಕೊಳ್ಳಿ:ಶ್ರೀನಿವಾಸ

ತಾಳಿಕೋಟೆ:ಮೇ.16: ವಿಶ್ವಕರ್ಮ ಸಮಾಜ ಬಾಂಧವರ ವತಿಯಿಂದ ಇಂದಿನಿಂದ 10 ದಿನಗಳ ಕಾಲಾವಧಿಯಲ್ಲಿ ಏರ್ಪಡಿಸಲಾಗಿರುವ ಸಂದ್ಯಾವಂದನೆಯೆಂಬ ಶಿಬಿರವು ಸಮಾಜದ ಹಿತದೃಷ್ಟಿಯದ್ದಾಗಿದೆ ಕಾರಣ ಸಮಾಜ ಬಾಂಧವರು ಈ ಶಿಬಿರದಲ್ಲಿ ಪಾಲ್ಗೊಂಡು ಸಮಯಕ್ಕನುಸಾರ ಆಗಮಿಸಿ ಶಿಬಿರದ ಲಾಭ ಪಡೆಯಬೇಕೆಂದು ಸ್ಥಳೀಯ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ ಸೋನಾರ ಅವರು ನುಡಿದರು.
ಬುಧವಾರರಂದು ವಿಶ್ವಕರ್ಮ ಸಮಾಜ ಬಾಂಧವರ ಕುಲದೇವತೆಯಾದ ಶ್ರೀ ಕಾಳಿಕಾದೇವಿ ಮಂದಿರದ ಸಬಾಭವನದಲ್ಲಿ ಏರ್ಪಡಿಸಲಾದ ಸಂಧ್ಯಾವಂದನೆ ಶಿಬಿರದ ಕಾರ್ಯಕ್ರಮವನ್ನು ದೀಪಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಈ ಶಿಭಿರದಲ್ಲಿ ಖ್ಯಾತ ವಿಶ್ವನಾಥ ಶರ್ಮಾ ಆಚಾರ್ಯರು ಮಹತ್ವಪೂರ್ಣವಾದ ಶಿಬಿರದ ಮಾಹಿತಿ ನೀಡಲಾಗುತ್ತಿದ್ದು ಈ ಶಿಭಿರದಲ್ಲಿರುವ ಮುಖ್ಯಾಂಶಗಳೆನೆಂದರೆ ಗಾಯತ್ರಿ ಮಂತ್ರದ ವಿವರಣೆ ಹಾಗೂ ಜನಿವಾರಧಾರಣೆ ಕುರಿತು ಮಾಹಿತಿ, ಅಡಮಾನ ಮತ್ತು ಪ್ರಾಣಯಾಮ, ಭಸ್ಮಧಾರಣೆ, ಹಾಗೂ ಧ್ಯಾನದ ಭಗ್ಗೆ ಮಾಹಿತಿಯನ್ನು ನೀಡಲಿದ್ದಾರೆಂದು ಹೇಳಿದ ಶ್ರೀನಿವಾಸ ಅವರು ಮುಂಬರುವ ದಿನಮಾನಗಳಲ್ಲಿ ಈ ಶಿಬಿರವನ್ನು ಏರ್ಪಡಿಸುತ್ತಾ ಎಲ್ಲ ನಮ್ಮ ಸಮಾಜ ಬಾಂಧವರಗೆ ಮನವರಿಕೆ ಮಾಡಕೊಡಲಾಗುವದೆಂದ ಅವರು ಸರಿಯಾದ ಸಮಯಕ್ಕೆ ಶಿಭಿರದಲ್ಲಿ ಪಾಲ್ಗೊಂಡು ಅದರ ಪ್ರಯೋಜನ ಪಡೆಯಬೇಕೆಂದರು.
ಇನ್ನೋರ್ವ ಸಂಧ್ಯಾವಂದನೆ ಶಿಬಿರ ಕುರಿತು ಮಾಹಿತಿ ನೀಡಲು ಆಗಮಿಸಿದ ಖ್ಯಾತ ವಿಶ್ವನಾಥ ಶರ್ಮಾ ಆಚಾರ್ಯ ಅವರು ಮಾತನಾಡಿ ಸಂಪ್ರದಾಯ ಹಾಗೂ ಧಾರ್ಮಿಕ ನಮ್ಮ ವಿಶ್ವ ಬ್ರಾಹ್ಮಣರ ಸಂಭಂದಿತ ವಿಧಿವಿಧಾನಗಳನ್ನುತಿಳಿದುಕೊಳ್ಳುವ ಸಲುವಾಗಿ ಹಾಗೂ ಸ್ತ್ರೋತ್ರ ಪಾರಾಯಣಗಳ ಕುರಿತು ಮಾಹಿತಿ ಒದಗಿಸಲಾಗುವದಲ್ಲದೇ 10 ದಿನಗಳ ವರೆಗೆ ನಡೆಯುವ ಈ ಶಿಭಿರ ಇಂದಿನಿಂದ ಪ್ರತಿದಿನ ಬೆಳಿಗ್ಗೆ 6 ಘಂಟೆಯಿಂದ 8 ಘಂಟೆಯವರೆಗೆ ಹಾಗೂ ಸಾಯಂಕಾಲ 6 ಘಂಟೆಯಿಂದ 8 ಘಂಟೆಯವರೆಗೆ ಪ್ರವಚನ ಮೂಲಕ ಮಾಹಿತಿ ಒದಗಿಸಲಾಗುವದೆಂದರು.
ಈ ಸಮಯದಲ್ಲಿ ಶ್ರೀಕಾಳಿಕಾದೇವಿ ದೇವಸ್ಥಾನದ ಅರ್ಚಕರಾದ ಭೀಮರಾಯ ಬಡಿಗೇರ, ಪುರಸಭಾ ಸದಸ್ಯ ಮೋಹನ ಬಡಿಗೇರ, ಸಂತೋಷ ಚಿಕ್ಕೋಡಿ, ಪ್ರಜ್ವಲ್ ಬಡಿಗೇರ, ಶ್ರೀನಿವಾಸ ಪತ್ತಾರ, ಗಂಗಾಧರ ಬಡಿಗೇರ, ಪ್ರಭು ಬಡಿಗೇರ ಅವರನ್ನೊಳಗೊಂಡು ಶಿಭಿರಾರ್ಥಿಗಳು ಪಾಲ್ಗೊಂಡಿದ್ದರು.