ಸಂಧ್ಯಾರಾಗ ಸಂಗೀತ ಕಾರ್ಯಕ್ರಮ

ಗದಗ, ಜೂ26: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ-ಬೆಟಗೇರಿ ನಗರಸಭೆ ಸಹಯೋಗದಲ್ಲಿ ಗದಗ ನಗರದ ಭೀಷ್ಮ ಕೆರೆಯ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಸಂದ್ಯಾರಾಗ ಸಂಗೀತ ಕಾರ್ಯಕ್ರಮವನ್ನು ರವಿವಾರ ಸಾಯಂಕಾಲ ಏರ್ಪಡಿಸಲಾಗಿತ್ತು.
ಸಾಯಂಕಾಲ 5 ರಿಂದ 6 ಗಂಟೆಯವರೆಗೆ ಗಂಟೆಗೆ ಭೀಷ್ಮ ಕೆರೆ ಆವರಣದಲ್ಲಿ ಸಂಧ್ಯಾರಾಗ ಕಾರ್ಯಕ್ರಮವನ್ನು ಕಲಾವಿದ ಡಿ.ಎಚ್.ಅಣ್ಣಿಗೇರಿ ಹಾಗು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ಜತುಗಿತು.
ಈ ವೇಳೆ ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ವಾರ್ತಾಧಿಕಾರಿ ವಸಂತ ಮಡ್ಲೂರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಗಣ್ಯರಾದ ಪ್ರಭು ಬುರಬುರೆ ಸೇರಿದಂತೆ ಸಾರ್ವಜನಿಕರು ಇದ್ದರು.