ಸಂದೇಶ ಸಾರುವ ಡಿಎನ್‌ಎ

ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆ ಚಿತ್ರಗಳು ಸೆಟ್ಟೇರುತ್ತಿವೆ.ಅದರ ಸಾಲಿಗೆ “ಡಿಎನ್ಎ” ಹೊಸ ಸೇರ್ಪಡೆ. ಸದ್ಯ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಗೆ ಸಜ್ಜಾಗಿದೆ.

ಡಿಎನ್‌ಎ ಎಂದರೆ ಇದೊಂದು ಕಣ ಗುರುತಿಸುವ ಸಿನಿಮಾ. ಸಂದೇಶ ಸಾರುವ ಕಥೆಯನ್ನು ನಿರ್ದೇಶಕ ಪ್ರಕಾಶ್ ರಾಜ್ ಮೇಹು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಪ್ರಯತ್ನ ಮಾಡಲಾಗಿದೆ.

ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಎಸ್ಟರ್ ನರೋನ್ಹ, ಯುಮನಾ, ಮಾಸ್ಟರ್ ಆನಂದ್ ಅವರ ಪುತ್ರ ಮಾಸ್ಟರ್​ ಕೃಷ್ಣ ಚೈತನ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ವೇಳೆ ಮಾತಿಗಿಳಿದ ನಿರ್ದೇಶಕ ಪ್ರಕಾಶ್ ರಾಜ್ ಮೇಹು,ಕಳೆದ 25 ವರ್ಷಗಳಿಂದ ಸಿನಿಮಾರಂಗದಲ್ಲಿದ್ದೇನೆ. ಮೊದಲ ಸಿನಿಮಾ. ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದರಿಂದ ಸಿನಿಮಾ ಒಂದೇ ವರ್ಗಕ್ಕಷ್ಟೇ ಸೀಮಿತ ಆಗಬಾರದು ಎಂಬ ನಿಟ್ಟಿನಲ್ಲಿ ಆರ್ಟ್​ ಚಿತ್ರವಾಗಿಸದೇ, ಪೂರ್ಣ ಕಮರ್ಷಿಯಲ್​ ಚಿತ್ರವಾಗಿಸದೇ ಅದರ ನಡುವಿನ ಸಿನಿಮಾವನ್ನಾಗಿ ಡಿಎನ್ಎ ಮಾಡಿದ್ದೇನೆ.

ಕನ್ನಡದಲ್ಲಿ ಸಿನಿಮಾ ಬೇಕು ಅಂತ ತುಂಬ ದಿನಗಳಿಂದ ಕಾಯುತ್ತಿದ್ದೆ. ಈಗ ಡಿಎನ್ಎ ಮೂಲಕ ಗಟ್ಟಿ ಕಥೆಯೊಂದಿಗೆ ಬಂದಿದ್ದೇನೆ. ಸಂಬಂಧಗಳ ಬಗ್ಗೆ ಸಿನಿಮಾ ಮಾತನಾಡಲಿದೆ ಎಂದರು. ನಾಯಕಿ ಎಸ್ಟರ್ ನರೋನಾ, ನಮ್ಮ‌ ನಡುವಿನ ಕಥೆ ಇದು ಎಂದರು.

ನಟ‌ಅಚ್ಯುತ್ ಕುಮಾರ್‌, ನಾನು ಮತ್ತು ನಿರ್ದೇಶಕರು ಒಂದೇ ಶಾಲೆಯಲ್ಲಿ ಓದಿದವರು. ಆದರೆ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಸಿನಿಮಾ ಮೂಲಕ ಅದು ಸಾಕಾರವಾಗಿದೆ. ಇದು ಸಂಬಂಧಗಳ ಕುರಿತು ಮಾಡಿದ ಸಿನಿಮಾ. ತಂಡಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ನಿರ್ಮಾಪಕ ಮೈಲಾರಿ ಎಂ, ಸಂಪೂರ್ಣ ಕುಟುಂಬ ಕುಳಿತು ನೋಡುವ ಸಿನಿಮಾ ಇದು.. ಈಗಾಗಲೇ ಸೆನ್ಸಾರ್ ಮಂಡಳಿಯವರೂ ಚಿತ್ರವನ್ನು ಮೆಚ್ಚಿ ಯು ಸರ್ಟಿಫಿಕೇಟ್ ನೀಡಿದ್ದಾರೆ. ಇದೇ ತಿಂಗಳ 16ಕ್ಕೆ ಅಥವಾ 30ಕ್ಕೆ ಸಿನಿಮಾ ತೆರೆಗೆ ತರುವ ಪ್ಲಾನ್ ಇತ್ತು. ಕೋವಿಡ್ ನಿಂದಾಗಿ ಶೇ.50 ಸೀಟು ಭರ್ತಿಗೆ ಅವಕಾಶ ಇರುವುದರಿಂದ ಸದ್ಯಕ್ಕೆ ಬಿಡುಗಡೆ ಮುಂದೂಡಿದ್ದೇವೆ ಎಂದರು.

ಹಿರಿಯ ಸಂಗೀತ ನಿರ್ದೇಶಕ ವಿ ಮನೋಹರ್, ಸಿನಿಮಾ ಮಾಡುವುದು ಈಗಿನ ಕಾಲದಲ್ಲಿ ಕಷ್ಟದ ಕೆಲಸ. ಅದನ್ನು ಡಿಎನ್ಎ ತಂಡ ಮಾಡಿದೆ. ಇಡೀ ತಂಡಕ್ಕೆ ಶುಭವಾಗಲಿ ಎಂದರು.

ಸಂಗೀತ ನಿರ್ದೇಶಕ ಚೇತನ್ ಕೃಷ್ಣ, ನಾಲ್ಕು ಹಾಡು, ಎರಡು ಬಿಟ್ ಇದೆ.. ರಾಜೇಶ್ ಕೃಷ್ಙ, ಅನುರಾಧಾ ಭಟ್, ಪುಟಾಣಿ ಕೃತಿ, ಮತ್ತೊಂದು ಹಾಡಿಗೆ ನಾನೇ ಧ್ವನಿ ನೀಡಿದ್ದೇನೆ ಎಂದರು. ರವಿಕುಮಾರ್ ಛಾಯಾಗ್ರಹಣ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.