ಸಂದೀಪ್ ನಾಯಕ್‌ರಿಂದ ಭರ್ಜರಿ ಪ್ರಚಾರ

ರಾಯಚೂರು,ಏ.೨೯- ಮಾನ್ವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಿ.ವಿ. ನಾಯಕ್ ಪರವಾಗಿ ಮಾಜಿ ಜಿ. ಪಂ. ಸದಸ್ಯರಾದ ಸಂದೀಪ್ ನಾಯಕ್ ಅವರು ಕ್ಷೇತ್ರದಲ್ಲಿ ಬರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಬಿಜೆಪಿ ತತ್ವ ಸಿದ್ಧಾಂತ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಆಡಳಿತವನ್ನು ಮೆಚ್ಚಿ ಕಾಂಗ್ರೆಸ್ -ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಂದೀಪ್ ನಾಯಕ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಮಾನ್ವಿ ನಗರದ ಇಂದಿರಾ ನಗರ, ಕೋನಪೂರು ಪೇಟೆ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ನೀಡುವಂತೆ ಪ್ರಚಾರ ಮಾಡುತ್ತಿದ್ದಾರೆ.
ಈ ಸಂಧರ್ಭದಲ್ಲಿ ಅರುಣ್ ಕುಮಾರ್ ಚಾಂದ್, ವಿಜಯಕುಮಾರ್ ಮೇಟಿಗೌಡ, ಬಸವರಾಜ್, ಮಹಾಂತೇಶ್ ಅಲ್ದಾಳ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.