ಸಂದರ್ಶನ ಮತ್ತು ರೆಸುಮ್ ರೈಟಿಂಗ್ ಕಾರ್ಯಗಾರ

ಔರಾದ :ಮಾ.15: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮಾಹಿತಿ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ “ಸಂದರ್ಶನ ಮತ್ತು ರೆಸುಮ್ ರೈಟಿಂಗ್” ಕಾರ್ಯಾಗಾರ ಜರುಗಿತು.

ಬೀದರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಭೀಮಷ ರವರು ವಿಶೇಷ ಉಪನ್ಯಾಸ ನೀಡಿದ ಅವರು ವಿದ್ಯಾರ್ಥಿಗಳಿಗೆ ಪದವಿ ನಂತರ ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ ಸೇರಬೇಕಾದರೆ ಸಂದರ್ಶನ ಮತ್ತು ರೆಸುಮ್ ರೈಟಿಂಗ್ ಬರೆಯುವ ವಿಧಾನಗಳು ಅನುಸರಿಸಬೇಕಾದ ಪ್ರಮುಖ ಕ್ರಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಉದ್ಯೋಗ ಮಾಹಿತಿ ಘಟಕದ ಸಂಯೋಜಕ ಪೆÇ್ರ.ಸಚ್ಚಿದಾನಂದ ರುಮ್ಮಾ ಅವರು ಮಾತನಾಡಿ ವಿದ್ಯಾರ್ಥಿಗಳು ಯಾವುದೆ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಸೇರಬೇಕಾದರೆ ಸಂದರ್ಶನ ಮತ್ತು ರೆಸುಮ್ ರೈಟಿಂಗ್ ಬಹು ಪ್ರಮುಖವಾಗಿದೆ, ಪ್ರ-ಪ್ರಥಮವಾಗಿ ಈ ಹಂತವನ್ನು ದಾಟಿ ಹೊಗಬೆಕಾಗುತ್ತದೆ ಆದ್ದರಿಂದ ಇದು ಪ್ರಮುಖ ಮತ್ತು ಪ್ರಥಮ ಘಟ್ಟವಾಗಿದೆ ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಈ ಕಾರ್ಯಗಾರದ ಸದುಪಯೊಗ ಪಡೆದುಕೊಳಬೇಕು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಭಾರಿ ಪ್ರಾಂಶುಪಾಲ ಡಾ.ಜೈಶಿಲಾ ಅಧ್ಯಕ್ಷತೆ ವಹಿಸಿದರು, ಪೆÇ್ರ.ವೇದಪ್ರಕಾಶ ಆರ್ಯ ನಿರೂಪಿಸಿದರು, ಪೆÇ್ರ.ವಿನಾಯಕ ಕೊತಮಿರ್, ಅಂಬಿಕಾದೇವಿ, ಸುನಿತಾ ಭಾಸ್ಕರ್, ಪ್ರೇಮಲಾ ರೊಡೆ, ಚಂದ್ರಕಾಂತ, ಪ್ರಿಯಾಂಕಾ, ಜಯದೇವಿ, ಗುರಮ್ಮ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.