ಸಂದರ್ಶನದಲ್ಲಿ ಪ್ರಾಮಾಣಿಕತೆ ಕಳೆದುಕೊಳ್ಳುವದು ಬೇಡ:ಶ್ರೀಧರ

ತಾಳಿಕೋಟೆ:ಜ.12: ವಿದ್ಯಾರ್ಥಿ ಜೀವನವೆಂಬುದು ಜೀವನದಲ್ಲಿ ಒಮ್ಮೇ ಬರುತ್ತದೆ ಅದು ಮರಳಿ ಬರುವಂತಹದ್ದಲ್ಲಾ ಆ ಜೀವನದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಯಾವುದನ್ನು ಅರ್ಥೈಸಿಕೊಂಡು ನಡೆಯಬೇಕೆಂಬುದನ್ನು ವಿದ್ಯಾರ್ಥಿಗಳು ಕಲಿತು ಅರೀತುಕೊಂಡರೆ ಮುಂದಿನ ಜೀವನ ಸಾರ್ಥಕ ಗೊಳ್ಳಲಿದೆ ಎಂದು ಉಪವಿಭಾಗಾಧಿಕಾರಿಯಾಗಿ ಬಡ್ತಿಹೊಂದಿದ ಶ್ರೀಧರ ಗೋಟೂರ ಅವರು ನುಡಿದರು.

ಬುಧವಾರರಂದು ಸ್ಥಳೀಯ ಶ್ರೀ ಖಾಸ್ಗತೇಶ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯದ ವಿರಕ್ತಶ್ರೀ ಸಭಾಭವನದಲ್ಲಿ ಏರ್ಪಡಿಸಲಾದ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆ ಎನ್.ಎಸ್.ಎಸ್.ಎನ್.ಸಿ.ಸಿ. ಮತ್ತು ವಾಯ್.ಆರ್.ಸಿ. ವಿವಿಧ ಚಟುವಟಿಕೆಗಳನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಶಿಕ್ಷಣದ ಉಪಯೋಗ ಎಂತಹದ್ದೆಂಬುದು ಅದು ಕಲಿತ ನಂತರ ಗೊತ್ತಾಗುತ್ತದೆ ಆದರೆ ವಿದ್ಯಾರ್ಥಿಗಳಲ್ಲಿ ಡಿಗ್ರಿ ಮುಗಿಸಬೇಕೆಂಬ ಆಸೆ ಹೆಚ್ಚಾಗಿರುತ್ತದೆ ಅದರಲ್ಲಿ ಚಾಲೇಂಜಿಂಗ್ ವಿದ್ಯಾರ್ಥಿಗಳು ತಮ್ಮ ತಮ್ಮ ಅಪೇಕ್ಷೆ ಅನುಗುಣಕ್ಕೆ ಸಂಬಂದಿಸಿದ ನೌಕರಿಯನ್ನು ಅವಲಂಬಿಸಿ ಮುಂದುವರೆದಿರುತ್ತಾರೆಂದರು. ಜೀವನದಲ್ಲಿ ಗುರಿ ಎಂಬುದನ್ನು ಇಟ್ಟು ನಡೆಯಬೇಕು ಅದರಿಂದ ದಿಕ್ಕನ್ನು ಬದಲಾಯಿಸಬಹುದೆಂದ ಅಧಿಕಾರಿ ಶ್ರೀಧರ ಅವರು ಉದ್ಯೋಗಸ್ತರಿಗಾಗಿ ಬಧುಕಲು ಅನೇಕ ಉದ್ಯೋಗ ಅವಕಾಶಗಳಿವೆ ಅಂತಹದ್ದರಲ್ಲಿ ಗಳಿಕೆ ಮಾಡಬಹುದು ಆದರೆ ಸರ್ಕಾರಿ ಹುದ್ದೆಗಳಲ್ಲಿ ಅವಕಾಶ ಕಲ್ಪಿಸಿಕೊಂಡರೆ ಪ್ರಾಮಾಣಿಕ ತನವೆಂಬುದು ಅಗತ್ಯವಾಗಿದೆ ಎಂದ ಅವರು ಕೆ.ಎ.ಎಸ್. ಐಎ.ಎಸ್.ಪರಿಕ್ಷೆಗಳ ಬಗ್ಗೆ ಭಯಬೇಡಾ ಅವುಗಳಂತಹ ಸರಳವಾದ ಪರಿಕ್ಷೆಗಳು ಮತ್ಯಾವವು ಇಲ್ಲಾವೆಂದ ಅವರು ತಾವು ಅರ್ಥೈಸಿಕೊಂಡಿದ್ದನ್ನು ತಿಳಿ ಹೇಳಿದ ಅವರು ಓದು ಬರಹಗಳಲ್ಲಿ ತಪ್ಪು ತಡಿ ಎಂಬುದಾಗಬಾರದು ಅದರಲ್ಲಿ ತಪ್ಪುಯಾವುದೆಂಬುದನ್ನು ತಿಳಿದು ನಾವು ಹೇಗೆ ಬಧುಕಬೇಕೆಂಬುದು ಇನ್ನೊಬ್ಬರಿಗೆ ಹೇಗೆ ಬಧುಕಲು ಬಿಡಬೇಕೆಂಬುದನ್ನು ಅರೀತು ಅನ್ಯರಿಗೆ ಮರ್ಯಾದೆ ಕೊಟ್ಟು ಮರಳಿ ಮರ್ಯಾದೆಯನ್ನು ಪಡೆದುಕೊಳ್ಳಬೇಕೆಂದರು. ಯಾವುದೇ ನೌಕರಿಗಾಗಿ ಬರುವ ಸಂದರ್ಶನಗಳಲ್ಲಿ ತಿಳಿದಷ್ಟನ್ನೇ ಸತ್ಯವಾಗಿ ವಿವರಿಸಬೇಕೆ ವಿನಃ ಇಲ್ಲಸಲ್ಲದ ಉತ್ತರ ನೀಡುವಂತಹ ಕಾರ್ಯವಾಗಬಾರದೆಂದು ಹೇಳಿದ ಅಧಿಕಾರಿ ಶ್ರೀಧರ ಅವರು ಪ್ರಾಮಾಣಿಕತೆ ಅನ್ನುವದು ಸಂದರ್ಶನಗಳಲ್ಲಿ ಕಳೆದುಕೊಳ್ಳಬೇಡಿ ಎಂದು ಉಪಸ್ಥಿತ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ತಮ್ಮ ಇಡೀ ಜೀವನದ ಇತಿಹಾಸವನ್ನು ವಿವರಿಸಿದರು.

ಇನ್ನೋರ್ವ ಅಧ್ಯಕ್ಷತೆ ವಹಿಸಿದ್ದ ಎಸ್.ಕೆ.ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯದ ಪ್ರಾಚಾರ್ಯ ಆರ್.ವ್ಹಿ.ಜಾಲವಾದಿ ಅವರು ಮಾತನಾಡಿ ಕೆ.ಎ.ಎಸ್. ಐಎಎಸ್ ಪರಿಕ್ಷೆಗಳನ್ನು ಬಹಳೇ ಸರಳವಾಗಿ ಬರೆದು ಪಾಸಾಗಬಹುದೆಂಬುದನ್ನು ಹೇಳಿದ ಅಧಿಕಾರಿ ಶ್ರೀಧರ ಅವರು ತಿಳಿಸಿಕೊಟ್ಟಿದ್ದಾರೆ ಅಂಕಗಳು ಅಗತ್ಯವಿಲ್ಲಾ ಸಾಮಾನ್ಯ ಜ್ಞಾನವಿದ್ದರೆ ನಿರ್ಧಿಷ್ಟ ಸಾಧನೆಯ ಗುರಿ ಇದ್ದರೆ ಬೇಕಾದುದ್ದನ್ನು ಸಾಧಿಸಬಹುದಾಗಿದೆ ಎಂದ ಅವರು ಸಮಯ ಪ್ರಜ್ಞೆ ಸಾಮಾನ್ಯ ಜ್ಞಾನವಿರಬೇಕು ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಇದರಿಂದ ಸ್ಪರ್ದಾತ್ಮಕ ಪರಿಕ್ಷೆಗಳನ್ನು ಪಾಸಾಗಲು ಅನುಕೂಲವಾಗಲಿದೆ ಶಿಕ್ಷಣವೆಂಬುದು ಒಳ್ಳೆಯ ನಾಗರಿಕತೆ, ಒಳ್ಳೆಯ ಕೌಶಲ್ಯ ಬೆಳೆಸಿಕೊಳ್ಳಲು ಹಾಗೆ ಒಳ್ಳೆಯ ವ್ಯಕ್ತಿಯಾಗಿ ರೂಪಿಸಿಕೊಳ್ಳುವ ಕಾರ್ಯಕ್ಕೆ ಅನುಕೂಲವಾಗಲಿದೆ ಎಂದು ತಮ್ಮ ಮಹಾ ವಿದ್ಯಾಲಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಕುರಿತು ವಿವರಿಸಿದರು.

ಇನ್ನೋರ್ವ ವೀರಶೈವ ವಿದ್ಯಾವರ್ದಕ ಸಂಘದ ಹಾಗೂ ಎಸ್.ಕೆ.ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯದ ಅಧ್ಯಕ್ಷ ವ್ಹಿ.ಸಿ.ಹಿರೇಮಠ ಅವರು ಮಾತನಾಡಿ ತಾಳಿಕೋಟೆ ತಾಲೂಕಿನಲ್ಲಿ ತಹಶಿಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಧರ ಗೋಟೂರ ಅವರ ನಿಷ್ಠಾವಂತ ಪ್ರಾಮಾಣಿಕ ಸೇವೆ ಇಂದು ಉನ್ನತ ಸ್ಥಾನಮಾನಕ್ಕೆ ಕೊಂಡೊಯ್ದು ಕೊಪ್ಪಳದ ಉಪವಿಭಾಗಾಧಿಕಾರಿಯಾಗಲು ಕಾರಣವಾಗಿದೆ ಅವರು ವಿದ್ಯಾರ್ಥಿಗಳಿಗೆ ಎಲ್ಲರಿಗೂ ತಿಳಿ ಹೇಳಿದ ಎಲ್ಲ ವಿವರವನ್ನು ಮನದಟ್ಟನೆ ಮಾಡಿಕೊಂಡು ಶಿಕ್ಷಣವೆಂಬುದರಲ್ಲಿ ಸನ್ಮಾರ್ಗ ಕಂಡುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವೇದಿಕೆಯ ಮೇಲೆ ವೀರಶೈವ ವಿದ್ಯಾವರ್ದಕ ಸಂಘದ ಉಪಾಧ್ಯಕ್ಷ ಬಿ.ಎನ್.ಹಿಪ್ಪರಗಿ, ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಸಹಕಾರ್ಯದರ್ಶಿ ಕಾಶಿನಾಥ ಮುರಾಳ, ನಿರ್ದೇಶಕರಾದ ರಮೇಶ ಸಾಲಂಕಿ, ಜಿ.ಎಸ್.ಕಶೆಟ್ಟಿ, ಕಾಶಿನಾಥ ಸಜ್ಜನ, ಗುರುಲಿಂಗ ಪಾಟೀಲ, ಸದಸ್ಯರಾದ ಪ್ರಭುಗೌಡ ಮದರಕಲ್ಲ, ಮೊದಲಾದವರು ಉಪಸ್ಥಿತರಿದ್ದರು.

ಕುಮಾರಿ ವಾಸವಿ ಜನಾದ್ರಿ ಪ್ರಾಸ್ಥಾವಿಕ ಮಾತನಾಡಿದರು. ಕು.ಸ್ನೇಹಾ ನಾವದಗಿ ಸ್ವಾಗತಿಸಿದರು. ಡಾ.ಅಶೋಕ ರಾಠೋಡ ಪರಿಚಯಿಸಿದರು. ಪ್ರಾದ್ಯಾಪಕ ಸಲಹೆಗಾರರಾದ ಹೇಮಾ ಜೈನಾಪೂರ ನಿರೂಪಿಸಿದರು. ಕು.ಕಲಾಶ್ರೀ ವಂದಿಸಿದರು.