ಸಂತ ಸೇವಾಲಾಲ್ ಮಹಾರಾಜರ ಜಯಂತ್ಯೋತ್ಸವ


ಲಕ್ಷ್ಮೇಶ್ವರ,ಮಾ.2: ಪಟ್ಟಣದಲ್ಲಿ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತೋತ್ಸವವನ್ನು ಸಡಗರ ಸಂಭ್ರಮದಿಂದ ಲಂಬಾಣಿ ಬಂಜಾರ ಸಮಾಜದವರು ಆಚರಿಸಿದರು.
ಪಟ್ಟಣದ ಪಂಪ ವೃತ್ತದಿಂದ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರವನ್ನು ಸಾರೋಟದಲ್ಲಿ ಇರಿಸಿ ಅದ್ದೂರಿಯಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು .
ಬಿರು ಬಿಸಿಲಿನ್ನು ಲೆಕ್ಕಿಸದೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನೂರಾರು ಯುವಕರು ಯುವತಿಯರು ಡಿಜೆ ಸೌಂಡಿಗೆ ಹೆಜ್ಜೆ ಹಾಕಿದರೆ ಲಂಬಾಣಿ ಮಹಿಳೆಯರು ಸಾಂಪ್ರದಾಯಿಕ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.
ನಂತರ ಶ್ರೀ ಸೋಮೇಶ್ವರ ದೇವಸ್ಥಾನದತೇರಿಮನೆ ಆವರಣದಲ್ಲಿ ಸಭಾ ಕಾರ್ಯಕ್ರಮ ಜರುಗಿತು ಸಮಾಜದ ಹಿರಿಯ ಮುಖಂಡ ದೀಪಕಲಮಾಣಿಯವರ ಮುಖಂಡತ್ವದಲ್ಲಿ ಪೂಜಾ ಕಾರ್ಯಕ್ರಮ ಮಂತ್ರ ಘೋಷಗಳ ಮೂಲಕ ಜರುಗಿತು ಬಳಿಕ ಶಾಸಕ ಚಂದ್ರು ಲಮಾಣಿ ಮಾಜಿ ಶಾಸಕ ರಾಮಣ್ಣ ಲಮಾಣಿ ಜಿ ಎಸ್ ಗಡ್ಡ ದೇವರ ಮಠ ಗಂಗಣ್ಣ ಮಹಾಂತ ಶೆಟ್ಟರ್ ಸಮಾಜದ ಅಧ್ಯಕ್ಷ ಶಿವಪ್ಪ ಲಮಾಣಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಚಂದ್ರುಲಮಾಣಿ ಅವರು ಮೂರು ಕೋಟಿ ರೂ ವೆಚ್ಚದಲ್ಲಿ ಕಲ್ಯಾಣ ಮಂಟಪ ಸಭಾಭವನ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ . 5 ತಂಡಗಳ ಅಭಿವೃದ್ಧಿಗಾಗಿ ತಲಾ 12 ಲಕ್ಷ ರೂಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ ಆದರೆ ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿಗೆ ವೇಗ ಸಿಗುತ್ತಿಲ್ಲ ಆದ್ದರಿಂದ ಯಾರು ಅಸಮಾಧಾನ ಗೊಳ್ಳುವ ಅವಶ್ಯಕತೆ ಇಲ್ಲ ಹಂತವಾಗಿ ಆದ್ಯತೆಯ ಮೇರೆಗೆ ಅಭಿವೃದ್ಧಿ ಕೈಗೊಳ್ಳುವದಾಗಿ ಮತ್ತು ಶೀಘ್ರದಲ್ಲಿಯೇ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಗಂಗಣ್ಣ ಮಹಾಂತ ಶೆಟ್ಟರವರು ನಮ್ಮ ಸಂಸ್ಕೃತಿ ಪರಂಪರೆ ಧರ್ಮ ನಿಷ್ಠೆಯೊಂದಿಗೆ ಬಾಳಿ ಬದುಕಬೇಕು ಅನ್ಯ ಧರ್ಮದವರೊಂದಿಗೆ ಸಾಮರಸ್ಯ ಬದುಕು ಸಾಗಿಸಬೇಕು ಯಾವುದೇ ಸಮಾಜಕ್ಕೂ ಮಾರ್ಗದರ್ಶನ ಮಾಡಲು ಓರ್ವ ಗುರುಗಳು ಅವಶ್ಯ ಎಂದರು.
ಮತ್ತೋರ್ವ ಮಾಜಿ ಶಾಸಕ ಜಿಎಸ್ ಗಡ್ಡ ದೇವರ ಮಠ ಅವರು ಮಾತನಾಡಿ ಪ್ರತಿಯೊಬ್ಬರಲ್ಲೂ ತ್ಯಾಗ ಮನೋಭಾವ ಬೆಳೆಯಬೇಕು ಇದು ಮನುಷ್ಯನನ್ನು ಎತ್ತರದ ಮಟ್ಟಕ್ಕೆ ಕೊಂಡಯುತ್ತದೆ ಎಂದರ ಲಂಬಾಣಿ ಮತ್ತು ಬಂಜಾರ ಸಮಾಜವು ವಿದ್ಯಾವಂತರಾಗಿ ಪ್ರತಿಭಾವಂತರಾಗಿ ಸಮಾಜ ಮತ್ತು ದೇಶದ ಮುನ್ನಡೆಗೆ ಕಾಣಿಕೆ ನೀಡಬೇಕು ಎಂದರು.
ಮಾಜಿ ಶಾಸಕ ರಾಮಣ್ಣ ಲಮಾಣಿ ಅವರು ಈ ಸಂದರ್ಭದಲ್ಲಿ ಮಾತನಾಡಿದರು ಶಿಗ್ಲಿ ಯ ರಾಮಣ್ಣ ಲಮಾಣಿ ದೀಪಕಲಮಾಣಿ ಮಾತನಾಡಿದರು ಕಾರ್ಯಕ್ರಮದಲ್ಲಿ ಬಂಜಾರ ಸಂಘದ ಅಧ್ಯಕ್ಷ ಶಿವಪ ಲಮಾಣಿ ಟೋಪಣ್ಣಾ ಲಮಾಣಿ, ಜಾನು ಲಮಾಣಿ ಪರಮೇಶ ಲಮಾಣಿ ಮಲ್ಲೇಶಪ್ಪ ಲಮಾಣಿ ದೇವಣ್ಣ ಲಮಾಣಿ ಗುರಪ್ಪ ಲಮಾಣಿ ಜಾನು ಲಮಾಣಿ ಮಲ್ಲೇಶಪ್ಪ ಲಮಾಣಿ ಈಶ್ವರಪ್ಪ ಲಮಾಣಿ ಅವರಪ್ಪ ಲಮಾಣಿ ಸೋಮಣ್ಣ ಲಮಾಣಿ ಹರದಗಟ್ಟಿ ಸೋಮ ರೆಡ್ಡಿ ಲಮಾಣಿ ಮಾನಪ್ಪ ಲಮಾಣಿ ಪುಂಡಲೀಕ ಲಮಾಣಿ ಸಂತೋಷ ಲಮಾಣಿ ಕೃಷ್ಣ ಲಮಾಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ವೆಂಕಟೇಶ ಅರ್ಕಸಾಲಿ, ಉಪನ್ಯಾಸ ನೀಡಿದರು ಎಂಕೆ ಲಮಾಣಿ ಸಂತೋಷ ಲಮಾಣಿ ಶಿವಪ ಲಮಾಣಿ. ನಿರ್ವಹಿಸಿದರು