ಸಂತ ಸೇವಾಲಾಲ್ ಬಗ್ಗೆ ಅಪಮಾನ ಸಲ್ಲದು

ಜಗಳೂರು.ಸೆ.೧೮;   ಸಂತ ಸೇವಾಲಾಲ್ ಅವರ ಹಾಗೂ ಪಶುಸಂಗೋಪನಾ ಸಚಿವ  ಪ್ರಭು ಚೌಹಾನ್ ಅವರ ಬಗ್ಗೆ ಹಾಡಿನ ಮೂಲಕ ನೀಡಿರುವ ಅವಹೇಳನಕಾರಿ ಹೇಳಿಕೆ‌ಸಲ್ಲದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಎಂದು ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಪುರುಷೋತ್ತಮನಾಯ್ಕ ಹೇಳಿದರು.ಪಟ್ಟಣದ ಪತ್ರಿಕಾಭವನದಲ್ಲಿ ಬಂಜಾರ ಸಮಾಜದ ವತಿಯಿಂದ  ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ  ಮಾತನಾಡಿದರು.ಎ.ಜೆ ಸದಾಶಿವ ಆಯೋಗದ ವರದಿ 20 ವರ್ಷ ಕಳೆದರೂ ಜಾರಿಗೆ ಬರದಂತೆ ಸಾರಾಂಶವೂ ತಿಳಿದಿಲ್ಲ ,ಸದಾಶಿವ ವರದಿ ಜಾರಿಗೆ ಪ.ಜಾತಿಯಲ್ಲಿನ ಶೇ. 90, ರಷ್ಟು ಜನರ ವಿರೋಧವಿದೆ.ಕುಲಂಕುಶವಾಗಿ ಅಧ್ಯಯನಮಾಡಿ ನ್ಯಾಯಕಲ್ಪಿಸಲು ಸರ್ಕಾರ ಆಡಳಿತ ,ನ್ಯಾಯಾಂಗ ವ್ಯವಸ್ಥೆಯಿದೆ ಆದರೆ ರಾಜಕೀಯವಾಗಿ ಪ್ರಚೋದಿಸಿ ಹುನ್ನಾರದಿಂದ ಸಂಘರ್ಷಕ್ಕೆ ಎಡೆಮಾಡಿಕೊಟ್ಟು ಅನ್ಯೂನ್ಯತೆಯಿಂದ ಬದುಕುತ್ತಿರುವಾಗ ಸಾಮರಸ್ಯ ಹಾಳುಮಾಡುತ್ತಿರುವುದು ಸರಿಯಲ್ಲ ಎಂದರು.
ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿಗೆ ಕಲ್ಪಿಸಿದ  ಶೇ.15 ರಷ್ಟು ಮೀಸಲಾತಿಯಡಿ ಮಾದಿಗ,ಛಲವಾದಿ,ಲಂಬಾಣಿ,ಬೋವಿ,ಕೊರಚ,ಕೊರಮ ಸೇರಿದಂತೆ ಹಲವು ಸಮುದಾಯಗಳು ಪರಿಶಿಷ್ಟ ಜಾತಿಗಳು ಸೌಲಭ್ಯಪಡೆಯುತ್ತಿದ್ದು ವೈಯಕ್ತಿಕ ಸಮುದಾಯಗಳು ತಮ್ಮ ತಮ್ಮ ಸ್ಥಾನಮಾನಗಳಿಗೆ  ಪ್ರತಿಪಾದನೆಗಳನ್ನು ಅಳವಡಿಸಿಕೊಂಡು ಅವರವರ ಹಕ್ಕುಗಳನ್ನು ಕಾನೂನಾತ್ಮಕವಾಗಿ ಹೊರಾಟನಡೆಸಿ ಪಡೆಯಬೇಕು ಎಂದು ತಿಳಿಸಿದರು.ಇತ್ತೀಚೆಗೆ ಸಹೋದರ ಸಮಾಜ ತಾಲೂಕಿನ ಮಾದಿಗ ಸಮಾಜದವರು ಪತ್ರಿಕಾಗೋಷ್ಠಿಯಲ್ಲಿ   ತಿಳಿಸಿದಂತೆ ನಾರಾಯಣ ಸ್ವಾಮಿ ಅವರ ಬಗ್ಗೆ ಲಂಬಾಣಿ ಸಮುದಾಯದವರು ಅಸೂಯೆ ಭಾವನೆ ಹೊಂದಿದ್ದಾರೆ ಎಂಬುದು ಸತ್ಯಕ್ಕೆ‌ದೂರ ಏಕೆಂದರೆ ಚಿತ್ರದುರ್ಗದಲ್ಲಿ ಲಂಬಾಣಿ ಸಮಾಜದವರು ಕೇಂದ್ರ ಸಚಿವ ನಾರಾಯಣಸ್ವಾಮಿ,ಮಾಜಿ ಸಚಿವ ಆಂಜನೇಯ ಮಾಜಿ ಸಂಸದ ಚಂದ್ರಪ್ಪ ಅವರುಗಳಿಗೆ ಮತ ನೀಡಿಲ್ಲವೇಎಂಬುದನ್ನು ಮನಗಾಣಬೇಕಿದೆ.ನಮಗೂ ಮಾದಿಗ ಸಮಾಜದ ಸಚಿವರ ಬಗ್ಗೆ ಹೆಮ್ಮೆಯಿದೆ.ನಾವೂ  ಭಾವಾನಾತ್ಮಕ ಜೀವಿಗಳು ಎಂದು ಉತ್ತರಿಸಿದರು.ಮಾದಿಗ ಸಮಾಜದವರು ಲಂಬಾಣಿ ಸಮುದಾಯದ ಸಂತರ ಸಚಿವರ ಬಗ್ಗೆ ಅಪಮಾನ ಗೊಳಿಸುತ್ತಿದ್ದರೂ ಮುರುಘಾಮಠ ಪೀಠದ ಮಾದಾರಚನ್ನಯ್ಯ ಗುರುಗಳು ಯಾಕೆ‌ ಮೌನವಹಿಸಿದ್ದಾರೆ ಎಂಬುದು ನೋವು ತಂದಿದೆ ಎಂದರು. ಈ ಸಂದರ್ಭದಲ್ಲಿ ಮೂರ್ತಿನಾಯ್ಕ ದತ್ತ ಹರೀಶ್ ಕೃಷ್ಣನಾಯ್ಕ ಸೇರಿದಂತೆ ಇದ್ದರು.