ಸಂತ ಸೇವಾಲಾಲರ ಜಯಂತಿ ಆಚರಣೆ

ಲಕ್ಷ್ಮೇಶ್ವರ,ಮಾ7: ಪಟ್ಟಣದಲ್ಲಿ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕ ಬಂಜಾರ ಸಮಾಜದವತಿಯಿಂದ ಬಂಜಾರ ಸಮಾಜದ ಕುಲದೈವ ಸಂತ ಸೇವಾಲಾಲರ 284 ನೇ ಜಯಂತೋತ್ಸವನ್ನು ಅತ್ಯಂತ ಶ್ರದ್ಧಾ ಭಕ್ತಿ ಗೌರವಗಳಿಂದ ಆಚರಿಸಲಾಯಿತು.
ಇದರ ಅಂಗವಾಗಿ ಅಲಂಕೃತ ಸಾರುಟದಲ್ಲಿ ಸಂತಸೇವಾಲಾಲರ ಭಾವಚಿತ್ರದ ಭವ್ಯವಾದ ಮೆರವಣಿಗೆ ಸಕಲವಾದ್ಯ ವೈಭಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಮೆರವಣಿಗೆಗೆ ಶಾಸಕ ರಾಮಣ್ಣ ಲಮಾಣಿ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಚಾಲನೆ ನೀಡಿದರು.ಬಳಿಕ ಮೆರವಣಿಗೆಯೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೇದಿಕೆಗೆ ಆಗಮಿಸಿತು.
ಶ್ರೀಸೋಮೇಶ್ವರ ದೇವಸ್ಥಾನದ ತೇರಿನ ಮನೆಯ ಮುಂದೆ ನಡೆದ ಸಮಾರಂಭವನ್ನು ಲಿಂಗಸೂರು ಛಾವಣಿಯ ವಿಜಯ ಮಹಾಂತೇಶ್ವರಮಠದ ಜಗದ್ಗುರು ಸಿದ್ದಲಿಂಗಶ್ರೀಗಳು ಹಾಗೂ ಶಾಸಕ ರಾಮಣ್ಣ ಲಮಾಣಿ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ನಂತರ ಆಶೀರ್ವಚನ ನೀಡಿದ ಸಿದ್ದಲಿಂಗಶ್ರೀಗಳು ಬಂಜಾರ ಗೋರ ಸಮಾಜವೂ ತನ್ನದೇ ಆದ ಸಂಸ್ಕೃತಿ ಇತಿಹಾಸ ಪರಂಪರೆ ಹೊಂದಿದೆ ಈ ಸಮಾಜ ಶತಶತಮಾನಗಳಿಂದಲೂ ಕಾಡುಮೇಡುಗಳಲ್ಲಿ ಸಂಚರಿಸಿ ಹಣ್ಣುಹಂಪಲಗಳನ್ನು ಸಂಗ್ರಹಿಸಿ ಅವುಗಳನ್ನು ಮಾರಾಟ ಮಾಡಿ ಉಪ ಜೀವನ ಸಾಗಿಸುತ್ತಿದ್ದಾರೆ. ಸದಾ ಕಷ್ಟಕಾರ್ಪಣ್ಯಗಳನ್ನೆ ನುಂಗ್ಗಿ ನಲಗುತ್ತಿರುವ ಈ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕಾದರೆ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಹೊಂದಿದವರು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಪ್ರತಿಯೊಬ್ಬರು ಶಿಕ್ಷಣಕ್ಕೆ ಆದ್ಯತೆ ನೀಡಿ ಶಿಕ್ಷಣದ ಮುಖಾಂತರ ಸಮಾಜದ ಸುಧಾರಣೆಗೆ ಮುಂದಾಗಬೇಕು ಎಂದರು.
ಶಾಸಕ ರಾಮಣ್ಣ ಲಮಾಣಿಯವರು ಮಾತನಾಡಿ, ಈ ಸಮಾಜದ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಈ ಸಮಾಜದ ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿದ್ದಾರೆ. ಶಾಸಕನಾಗಿ ಆಯ್ಕೆ ಮಾಡಿರುವ ಸಮಾಜದ ಕೊಡುಗೆ ಅಪಾರವಾಗಿದೆ. ನಾವೂ ಎಂದಿಗೂ ಕೈ ವಡ್ಡುವ ಸಂಸ್ಕೃತಿಯವರಲ್ಲ ಎಂದರು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ದೀಪಕ್ ಲಮಾಣಿ ಮಾತನಾಡಿದರು.
ಸಮಾರಂಭದಲ್ಲಿ ಶಿರಹಟ್ಟಿ ಸಂಸ್ಥಾನ ಮಠದ ಫಕ್ಕಿರ ದಿಂಗಾಲೇಶ್ವರ ಶ್ರಿಗಳು, ಆದರಹಳ್ಳಿಯ ಗವಿಮಠದ ಕುಮಾರ ಮಹಾರಾಜರು ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು. ರವಿಕಾಂತ ಅಂಗಡಿ, ಕೆ.ಸಿ.ಸಿ.ಬ್ಯಾಂಕ ನಿರ್ದೇಶಕ ಸುನೀಲ್ ಮಾಹಾಂತಶೆಟ್ಟರ, ಚಂದ್ರು ಲಮಾಣಿ, ಭೀಮಸಿಂಗ ರಾಠೋಡ, ಚಂಬಣ್ಣ ಬಾಳಿಕಾಯಿ, ಶಿವಪ್ಪ ಲಮಾಣ, ಶಾಸಕರ ಪುತ್ರ ಮಹೇಶ ಲಮಾಣ, ಜಯಮ್ಮ ಅಂದಲಗಿ, ಐ.ಎಸ್.ಪೂಜಾರ, ದೇವಪ್ಪ ಲಮಾಣಿ, ಟೋಪ್ಪಣ್ಣ ಲಮಾಣಿ, ರಾಮಣ್ಣ ಲಮಾಣಿ, ಶಿಗ್ಲಿ ಎಚ್.ಎಮ್.ನಾಯಕ, ಥಾವರಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ, ಈಶ್ವರಪ್ಪ ಲಮಾಣಿ, ಗುರಪ್ಪ ಲಮಾಣಿ, ಎಮ್.ಕೆ.ಲಮಾಣಿ, ಸೋಮಣ್ಣ ಲಮಾಣಿ, ಗಣೇಶ ನಾಯಕ, ಶೇಖಪ್ಪ ಲಮಾಣಿ, ಸುಶೀಲವ್ವ ಲಮಾಣಿ, ಪರಮೇಶ ಲಮಾಣಿ, ಲಾಲಪ್ಪ ಲಮಾಣಿ, ನಾನಪ್ಪ ಲಮಾಣಿ, ಭರತ ನಾಯಕ, ಸೋಮರೆಡ್ಡಿ ಲಮಾಣಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಣ್ಣ ಲಮಾಣಿ ವಹಿಸಿದರು. ವೆಂಕಟೇಶ ಅರ್ಕಸಾಲಿ ಉಪನ್ಯಾಸ ನೀಡಿದರು. ಕೃಷ್ಣ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.