ಸಂತ ಶ್ರೇಷ್ಠ ತುಕಾರಾಮ ಮಹಾರಾಜರ ಗಾಥಾ ಪಾರಾಯಣ

ಧಾರವಾಡ ಏ, 8 : ಸಂತ ಶ್ರೀ ರಾಜು ಮಹಾರಾಜ ಕುಂಭಾರ ಇವರ ನೇತೃತ್ವದಲ್ಲಿ 108 ತುಕಾರಾಮ ಮಹಾರಾಜರ ಗಾಥಾ ಪಾರಾಯಣ ಸಂಕಲ್ಪದಂತೆ, ಏಕನಾಥ ಷಷ್ಟಿ ಫಾಲ್ಗುಣ ಬಹುಳ ದ್ವಾದಶಿ ನಗರದ ಬಾಳೆಕಾಯಿ ಓಣಿಯ ಶ್ರೀ ನಾಮದೇವ ಹರಿಮಂದಿರದಲ್ಲಿ 8 ನೇ ಪಾರಾಯಣ ಜರುಗಿತು.
ನಾಮದೇವ ಸಿಂಪಿ ಸಮಾಜದ ವತಿಯಿಂದ ಗೌರವ ಅಧ್ಯಕ್ಷ ನಾರಾಯಣ ವಿರೂಪಾಕ್ಷಪ್ಪ ಕೋಪಡೆ9 ಹಾಗೂ ಆಡಳಿತ ಮಂಡಳಿ ಪಾರಾಯಣ ಮಾಡಲು ಸ್ಥಳಾವಕಾಶ ನೀಡಿ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಮಾತನಡಿ ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು. ಪರಿಣಾಮವಕ್ಕು ಪದವಕ್ಕು ಕೈಲಾಸ ನೆರೆಮನೆ ಬಿನ್ನಾನ ಎಂದು ಸವ9ಜ್ಞ ಹೇಳಿದ್ದಾರೆ. ನಾವು ಮಾಡುವ ದಾನ ನಮಗೆ ಹಾಗೂ ಸಮಾಜಕ್ಕೆ ತೃಪ್ತಿ ನೀಡುವಂತಿರಬೇಕು. ಕೈಗಳಿಗೆ ದಾನವೇ ಭೂಷಣ ಎಂದರು. ದಾನ ಮಾಡಿ ಪುಣ್ಯ ಗಳಿಸುವ ಎಲ್ಲರಿಗೂ ಸಿಗಲೆಂದು ಪಾರಾಯಣದಲ್ಲಿ ಭಾಗವಹಿಸಿದ ಸಂತರಿಗೆ ಉಪಹಾರ ಹಾಗೂ ಮಹಾಪ್ರಸಾದದ ವ್ಯವಸ್ಥೆ ನಮ್ಮ ದೇವಸ್ಥಾನ ಅಕ್ಕ ಪಕ್ಕ ಇದ್ದ ಲಿಂಗಾಯತ, ಕ್ಷತ್ರಿಯ, ಎಲಿಗಾರ, ಮರಾಠಾ ಸಮಾಜದ ಬಾಂಧವರು ಮಾಡಿದ್ದು ವಿಶೇಷ ಎಂದರು.
ಸಪ್ತಾಹದ ಕಾಯ9ಕ್ರಮದಲ್ಲಿ ವ್ಯಾಸಪೀಠಕ್ಕೆ ಸಂತರಾದ ಭುಜಂಗ ಪಾಟೀಲ್, ಗಣಪತಿ ಬುಚಡಿ, ಕಿರಣ ಪಾಸ್ತೆ, ಸುಭಾಸ ಜಾಧವ, ಕಿಶೋರ ಶಿನೂಳೆ, ಪ್ರವೀಣ ಮಾನೆ ಉಪಸ್ಥಿತರಿದ್ದರು. ಕೀತ9ನಕಾರರಾಗಿ ದೇವಪ್ಪ ಪವಾರ, ಬಸಪ್ಪಾ ಅಕ್ಕಿ, ಹನುಮಂತ ಗುಲಾಜನವರ, ಗುರುನಾಥ ತಿಲಾ9ಪೂರ, ಮಾರುತಿ ಓಲೇಕರ, ಬಸವರಾಜ ದೂಡವಾಡ, ಸೋಮಲಿಂಗ ಸುತಗಟ್ಟಿ, ಫಕೀರಪ್ಪ ಬಾದಗಿ, ದುಂಡಪ್ಪ ಬಾಗೇವಾಡಿ, ಯಶವಂತ ಲಮಾಣಿ ಸಪ್ತಾಹದ ಅವಧಿಯಲ್ಲಿ ತುಕಾರಾಮ ಮಹಾರಾಜ ಪವಾಡಗಳ ಬಗ್ಗೆ ಭಕ್ತರಿಗೆ ಮಾಹಿತಿ ನೀಡಿದರು.
ಮೃದಂಗ ವಾದಕರಾಗಿ ಯಲ್ಲಪ್ಪ ಮೂದಣ್ಣವರ, ಜಸಪಾಲಸಿಂಗ ತೇಗೂರ, ಪ್ರಕಾಶ ಸಿಂಗನಾಥ, ಭರಮಾ ಬಸರಗಿ ಪಿಂಟು ಎಲಿಗಾರ, ರಾಜು ಸಿಂಧೆ, ರುದ್ರಪ್ಪ ಶಿಲೂಜಿ, ಕರೆಪ್ಪಾ ಕರಿಕಟ್ಟಿ, ಬಳವಂತ ಪಾಚಂಗೆ, ಮಂಜು ಪಾಚಂಗೆ ತಮ್ಮ ಸೇವೆ ಸಲ್ಲಿಸಿದರು.
ಶಿಯಾಜಿ ಪವಾರ, ದಯಾನಂದ ಶಿಂಧೆ ಹಿರಾಬಾಯಿ ಮತ್ತು ಸಂಗಡಿಗರಿಂದ ಭಜನೆ ಕಾಯ9ಕ್ರಮ ಜರುಗಿತು. ಸಂತರಾದ ಲಕ್ಷ್ಮಣ ಮುಳೆ,ನಂದು ಜೋಶಿ ತುಕಾರಾಮ ಗಾಥಾ ಪಾರಾಯಣ ಯಶಸ್ವಿಗಾಗಿ ಶ್ರಮಿಸಿದರು. ನಾಮದೇವ ಹರಿಮಂದಿರದ ಸಂತ ಮಂಡಳಿ ,ರುಕ್ಕ್ಮೀಣಿ ಮಹಿಳಾ ಮಂಡಳ, ಯುವಕ ಮಂಡಳ ಉಪಸ್ಥಿತರಿದ್ದರು.