ಸಂತ ಶರಣರ ಆದರ್ಶ ಮೌಲ್ಯಗಳು ಅಳವಡಿಸಿಕೊಳ್ಳಬೇಕು 

ಹರಿಹರ ಮಾ 30 :  ವಚನಕಾರ ದೇವರ ದಾಸಿಮಯ್ಯ ಆದರ್ಶಪ್ರಾಯರು. ನೇಕಾರಿಕೆ ಕೆಲಸ ನಿರ್ವಹಿಸುತ್ತಾ ಆರ್ಥಿಕ ಜೀವನ ಕಟ್ಟಿಕೊಂಡು ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಇಡೀ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದು ತಹಶೀಲ್ದಾರ್ ಪೃಥ್ವಿ ಸಾನಿಕಂ ಹೇಳಿದರುತಾಲೂಕು ಆಡಳಿತ ವತಿಯಿಂದ ಮಿನಿ   ವಿಧಾನಸೌಧದ ಸಭಾಂಗಣದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತೋತ್ಸವ  ಕಾರ್ಯಕ್ರಮದಲ್ಲಿ ಶರಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು 12ನೇ ಶತಮಾನದ ಬಸವ ವಾದಿ ಶರಣರು ವಚನ ಸಾಹಿತ್ಯದ ಮೂಲಕ ದೊಡ್ಡ ಚಳವಳಿಯನ್ನೇ ಎಬ್ಬಿಸಿದವರು ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಆರ್ಥಿಕ ಮೊದಲಾದ ಬದಲಾವಣೆಗಳನ್ನು ಅಂದಿನ ಕಾಲದಲ್ಲಿ ನಾವು ನೀವು ಕಾಣುತ್ತಿದ್ದೇವೆ ಇದಕ್ಕೆಲ್ಲ ಮೂಲ ಭದ್ರ ಬುನಾದಿ ಹಾಕಿದವರು ಸಂತ ವಿಶ್ವಮಾನವ ದೇವರ ದಾಸಿಮಯ್ಯ ಶರಣರು ಇಂಥ ಮಹಾತ್ಮರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲಿಕ್ಕೆ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದರು.ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ದೇವಾಂಗ  ಮಾತನಾಡಿಪ್ರಜಾಪ್ರಭುತ್ವದ ಮೂಲ ಸೆಲೆಯೊಳಗೊಂಡ ವಚನಗಳನ್ನು ರಚಿಸುವ ಮೂಲಕ ಕಲ್ಯಾಣ ಕ್ರಾಂತಿಯನ್ನು ಮಾಡಿದರು ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯ ಬಸವಣ್ಣನವರಿಗೂ ಮೊದಲ ಆದ್ಯ ವಚನಕಾರ ದೇವರ ದಾಸಿಮಯ್ಯ ಆಗಿದ್ದು. ಅವರ ಚಿಂತನೆಗಳನ್ನು ಬಸವಣ್ಣನವರು ಎತ್ತರದ ಮಟ್ಟಕ್ಕೆ ಕೊಂಡೊಯ್ದರು.ದಾಸಿಮಯ್ಯ ರಚಿಸಿವರು 176 ವಚನಗಳು ಲಭ್ಯವಿದ್ದು, ಅವುಗಳು ರಾಮನಾಥ ಕಾವ್ಯನಾಮ ಹೊಂದಿವೆ. ದೈವಿಕತೆಯೇ ಆತ್ಮಸಾಕ್ಷಿ, ಆತ್ಮಸಾಕ್ಷಿಯೇ ದೇವರು ಎಂದು ದಾಸಿಮಯ್ಯ ವಚನಗಳ ಮೂಲಕ ತಿಳಿಸಿದ್ದಾರೆ. ಕರುಣೆ, ಪ್ರೀತಿ, ವಿಶ್ವಾಸ, ನಂಬಿಕೆ, ವಾತ್ಸಲ್ಯಗಳು ದೈವಿಕ ಅಂಶಗಳಾಗಿವೆ. ಇವುಗಳಲ್ಲಿ ಪ್ರೀತಿಯನ್ನು ನಮ್ಮ ಇಂದಿನ ಯುವಪೀಳಿಗೆ ದೇವರೆಂದು ಆರಾಧಿಸುತ್ತಿವೆ. ಈ ಆರಾಧನೆ ದುರ್ನಡತೆಯನ್ನು ಕಲಿಸದಿರಲಿ. ನಾವು ಸಮಾಜದಲ್ಲಿ ಹೇಗೆ ಬದುಕಬೇಕೆಂದು ತಿಳಿಸಿಕೊಡುವ ಕೆಲಸವನ್ನು ಶತಮಾನಗಳ ಹಿಂದೆ ರಚಿಸಿದ ವಚನಗಳು ಮಾರ್ಗದರ್ಶನ ಮಾಡುತ್ತವೆ. ಏಕೆಂದರೆ ವಚನಗಳ ರಚನೆಯಾಗಿದ್ದು, ಜನ ಸಾಮಾನ್ಯರ ಬದುಕು-ಬವಣೆಗಳನ್ನು ಕುರಿತು ಎಂದು ವಿವರಿಸಿದರು.