ಸಂತ ಲೂರ್ದು ಮಾತೆಯ ವಾರ್ಷಿಕ ಹಬ್ಬ ಆಚರಣೆ

ಸಂಜೆವಾಣಿ ವಾರ್ತೆ
ಹನೂರು ಫೆ 12 :- ತಾಲ್ಲೂಕಿನ ಮಾರ್ಟಳ್ಳಿ ಸಂತ ಲೂರ್ದು ಮಾತೆ ದೇವಾಲಯದ ವಾರ್ಷಿಕ ಹಬ್ಬ ಭಾನುವಾರ 1 ವಿಜೃಂಭಣೆಯಿಂದ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಕಳೆದ ಗುರುವಾರ ಧ್ವಜಾರೋಹಣದಿಂದ ಆರಂಭವಾಗಿ ಕಳೆದ ಮೂರು ದಿನಗಳಿಂದ ದಿವ್ಯ ಬಳಿಪೂಜೆ ,ಆರಾಧನೆ , ತೇರಿನ ಮೆರವಣಿಗೆ ನಡೆಯಿತು.
ಭಾನುವಾರ ಬೆಳಿಗ್ಗೆ ಆಡಂಬರದ ದಿವ್ಯ ಬಳಿಪೂಜೆ ವಂ.ಸ್ವಾಮಿ ನೆಪೆÇೀಲಿಯನ್ ರವರಿಂದ ನೆರವೇರಿಸಲಾಯಿತು.
ರಾತ್ರಿ ಭವ್ಯ ತೇರಿನ ಮೆರವಣಿಗೆ ಮಾಡುವ ಮೂಲಕ ಕ್ರೈಸ್ತರು ಸಂಭ್ರಮಿಸಿದರು.ವಿಶೇಷವಾಗಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಭವ್ಯತೇರನ್ನು ಊರಿನ ಸುತ್ತಮುತ್ತ ಮೆರವಣಿಗೆ ಮಾಡಲಾಯಿತು.
ಈ ವೇಳೆ ಭಕ್ತಾದಿಗಳು ಪ್ರಾರ್ಥನೆ ಹಾಗೂ ಸ್ತುತಿಗೀತೆಗಳನ್ನು ಹಾಡಿದರು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಕ್ರೈಸ್ತರು ಮೇಣದಬತ್ತಿಯನ್ನು ಹಿಡಿದುಕೊಂಡು ಸಾಗಿದರು. ಧರ್ಮ ಕೇಂದ್ರದ ಗುರುಗಳಾದ ವಂ.ಸ್ವಾಮಿ ಕ್ರಿಸ್ಟೋಫರ್ ಸಗಾಯರಾಜ್ ಮತ್ತು ಇನ್ನಿತರ ಗುರುಗಳು ಹಾಗೂ ಸಾವಿರಾರು ಭಕ್ತ ಸಮೂಹ ಜನರು ಉಪಸ್ಥಿತರಿದ್ದರು.