ಸಂತ ಪೌಲರ ಅಮೃತ ಮಹೋತ್ಸವ ಪರಿಸರ ಸ್ವಚ್ಛತೆ ನಡಿಗೆಗೆ ಚಾಲನೆ

ದಾವಣಗೆರೆ, ಆ. 6,; ನಗರದ ಸಂತ ಪೌಲರ ವಿದ್ಯಾಸಂಸ್ಥೆಯ 75ನೇ ವರ್ಷದ ಅಮೃತ ಮಹೋತ್ಸವ ಅಂಗವಾಗಿ ಶನಿವಾರ ಬೆಳಿಗ್ಗೆ ಪರಿಸರ ಸ್ವಚ್ಛತೆ ಜಾಗೃತಿ ಮತ್ತು ಸಂರಕ್ಷಣೆ ಕುರಿತು ಜಾಥಾ ಹಮ್ಮಿಕೊಳ್ಳಲಾಗಿತ್ತು.ಜಾಥಾಗೆ ಹಿರಿಯ ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ಚಾಲನೆ ನೀಡಿದರು.ಈ ಜಾಥಾದಲ್ಲಿ ಶಾಲೆಯ ವಿದ್ಯಾರ್ಥಿಗಳು, ಗೈಡ್, ಎನ್‌ಸಿಸಿ ಸೇರಿದಂತೆ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಮಳೆಯನ್ನೂ ಲೆಕ್ಕಿಸದೇ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಕಾಡು ಬೆಳೆಸಿ ನಾಡು ಉಳಿಸಿ, ನೀರನ್ನು ಮಿತವಾಗಿ ಬಳಸಿ, ಮನೆಗೊಂದು ಗಿಡ ಊರಿಗೊಂದು ವನ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಿದರು. ಪರಿಸರ ಜಾಗೃತಿ ಹಾಗೂ ಭೂಮಿ ಉಳಿವು ಕುರಿತು ಸ್ತಬ್ಧ ಚಿತ್ರಗಳು, ವಿವಿಧ ವೇಷ ಭೂಷಣಗಳೊಂದಿಗೆ ಕರಗ, ಕುಚ್ಚಿಪುಡಿ, ಗೊರವ, ಕೋಲಾಟ, ಡೊಳ್ಳು ಕುಣಿತ, ಗರ್ಬ, ಕಾಬಡಿ, ಪಂಜಾಬಿ, ನಂದಿಕೋಲು, 9 ಜನಪದ ನೃತ್ಯಗಳೊಂದಿಗೆ ಮಕ್ಕಳು ಭಾಗವಹಿಸಿ ಜಾಥಾಗೆ ಮರುಗು ತಂದರು.ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಕಾರ್ಯದರ್ಶಿ ಎಚ್.ಸಿ.ಜಯಮ್ಮ, ಮಾಜಿ ಶಾಸಕ ಬಿ.ಪಿ.ಹರೀಶ, ಪಾಲಿಕೆ ಸದಸ್ಯ ಎ.ನಾಗರಾಜ, ಶಾಲೆಯ ಆಡಳಿತ ಮಂಡಳಿಯ ಸಿಸ್ಟರ್ ಸಮಂತ, ಸಿಸ್ಟರ್ ಫ್ರಾನ್ಸಿನಸಿಸ್ಟರ್ ಮಾರ್ಜರಿ, ಸಿಸ್ಟರ್ ಅಲ್ಬಿನ, ಸಿಸ್ಟರ್ ಅನೀಸ್, ಸಿಸ್ಟರ್ ವಿಜೇತ, ಎಂ.ಕೆ.ಮAಜುಳ, ರಾಧಾ ಮಾಲತಿ, ಟಿ.ಎಂ.ರವೀAದ್ರ ಸ್ವಾಮಿ, ರಜನಿ, ಭಾಗ್ಯನಾಥನ್, ಕ್ಲಮೆನ್ಸಿಯ, ವೈಲೆಟ್, ಮೇಘನಾಥ, ಕಿರಣ್, ಗೋವಿಂದಪ್ಪ, ರೀಟಾ, ಪ್ರೇಮಾ, ಅನುರಾಧ ಸೇರಿದಂತೆ ಸಿಬಿಎಸ್‌ಇ, ಕಾಲೇಜು, ಪ್ರೆöÊಮರಿ ವಿಭಾಗದ ಶಿಕ್ಷಕಿಯರು ಭಾಗವಹಿಸಿದ್ದರು.ಜಾಥಾವು ಪಿ.ಜೆ.ಬಡಾವಣೆಯ ಶಾಲೆ ಆವರಣದಿಂದ ಹೊರಟು ಚರ್ಚ್ ರಸ್ತೆ, ಗುಂಡಿ ಸರ್ಕಲ್, ಚಿಗಟೇರಿ ಜಿಲ್ಲಾಸ್ಪತ್ರೆ ರಸ್ತೆ ಮುಖಾಂತರ ರಾಂ ಅಂಡ್ ಕೋ ಸರ್ಕಲ್‌ನಿಂದ ನೇರವಾಗಿ ಶಾಲೆ ಆವರಣ ತಲುಪಿತು.