ಸಂತ ನಿರಂಕಾರಿ ಮಂಡಳದಿಂದ ಅಪ್ಪನ ಕೆರೆ ಸ್ವಚ್ಛಅಭಿಯಾನ

ಕಲಬುರಗಿ,ಫೆ 26: ನಿರಂಕಾರಿ ಬಾಬಾ ಹರದೇವ ಸಿಂಗ್‍ಜೀ ಅವರ 69ನೇ ಜನ್ಮದಿನದಅಂಗವಾಗಿ ಅವರ ಪ್ರೇರಣೆಯಂತೆ ಕಲಬುರಗಿ ಸಂತ ನಿರಂಕಾರಿ
ಮಂಡಳ ವತಿಯಿಂದ ಇಂದು ನಗರದ ಶರಣಬಸವೇಶ್ವರ ಕೆರೆ (ಅಪ್ಪನ ಕೆರೆ)ಯಲ್ಲಿ ಪ್ರೊಜೆಕ್ಟ್ ಅಮೃತ (ಸ್ಚಚ್ಛ ಜಲ ಸ್ಚಚ್ಛ ಮನ) ಅಡಿಯಲ್ಲಿ ಜಲನೈರ್ಮಲ್ಯ ಹಾಗೂ ಜಲ ಸಂರಕ್ಷಣಾ ಅಭಿಯಾನವನ್ನು ಆಯೋಜಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ
ಪಟ್ಟಣ ಯೋಜನೆ ಸಮಿತಿ ಸದಸ್ಯ ಸಂಗಪ್ಪಾ ಗಾರಂಪಳ್ಳಿ ಅವರು ಅಭಿಯಾನಕ್ಕೆ
ಚಾಲನೆ ನೀಡಿದರು. ಸಂತ ನಿರಂಕಾರಿ ಮಂಡಳ ಕಲಬುರಗಿಯಅಧಿಕೃತ ಪ್ರಭಾರ ಸಂತೋಷ ರಾಠೋಡ್, ಮುಖ್ಯಅತಿಥಿಗಳನ್ನು ಸಂಪೂರ್ಣ ಹರದೇವವಾಣಿ ನೀಡಿ ಸನ್ಮಾನಿಸಿದರು.
ಹಿರಿಯ ಚಿತ್ರಕಲಾವಿದ ರಾಜಶೇಖರ ಎಸ್ , ಹುಮನಾಬಾದ ರಾಜಕುಮಾರ ಧುಮಾಳೆ, ಘಾಟಿಬೋರಳದಿಂದ ಪ್ರಭಾಕರಘಂಟೆ, ಪಂಡರಗೇರಾ ತಾಂಡಾದಿಂದ ವಿಜಯಕುಮಾರ ಚವ್ಹಾಣ,ಚೌಕ್ ವಾಡಿಯಿಂದ ಬಾಪುರಾವ ಹಾಗೂ ಸಂತ ನಿರಂಕಾರಿ ಮಂಡಳದ 300ಕ್ಕೂ ಮಹಿಳಾ ಮತ್ತು ಪುರುಷರು, ಮಕ್ಕಳು ಸ್ವಯಂ
ಸೇವಕರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.ಬೆಳಿಗ್ಗೆ 7 ಗಂಟೆಗೆ ಶ್ರಮದಾನ ಪ್ರಾರಂಭಿಸಿ ಕೆರೆ ಸುತ್ತಮುತ್ತ ಕೊಳಚೆಯನ್ನು ಮತ್ತು ಉದ್ಯಾನವನದಲ್ಲಿ ರಾಶಿ ರಾಶಿ ಬಿದ್ದ ಕಸವನ್ನು ಗುಡಿಸಿ ಸ್ವಚ್ಛಗೊಳಿಸಿದರು.