ಸಂತ ತುಕಾರಾಮ ಸಾಮಾಜಿಕ ಕೊಡುಗೆ ಅನನ್ಯ

ಕಲಬುರಗಿ.ಆ.4: ಸಮಾಜದಲ್ಲಿ ತುಂಬಿರುವ ಮೌಢ್ಯತೆ, ಅಂಧಶೃದ್ಧೆ, ಕಂದಾಚಾರ ಅಂತಹ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವಾಗಿ ತಮ್ಮ ಅನುಭಾವದ ಅಭಂಗಗಳನ್ನು ರಚಿಸಿ ಎಲ್ಲಡೆ ಜನಜಾಗೃತಿಯನ್ನು ಉಂಟುಮಾಡಿ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಮಹಾನ ಸಂತ ತುಕಾರಾಮ ಅವರ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ‘ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಸಂತ ತುಕಾರಾಮ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶದಲ್ಲಿ ಅನೇಕ ಸಂತರು, ಶರಣರು, ಮಹನೀಯರು ಕಾಲ-ಕಾಲಕ್ಕೆ ಜನಿಸಿ ಸಮಾಜ ಸುಧಾರಣೆಗಾಗಿ ನಿರಂತರವಾಗಿ ಪ್ರಯತ್ನಿಸಿದ್ದಾರೆ. ಅದರಲ್ಲಿ ಸಂತ ತುಕಾರಾಮ ಅವರು ಮಹಾರಾಷ್ಟ್ರ ರಾಜ್ಯದಲ್ಲಿ ತಮ್ಮದೇ ಆದ ಅಮೋಘವಾದ ಕೊಡುಗೆ ನೀಡಿದ್ದಾರೆ ಎಂದರು.
ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಬಸವರಾಜ ಎಸ್.ಪುರಾಣೆ, ಅಮರ ಬಂಗರಗಿ ಸೇರಿದಂತೆ ಇನ್ನಿತರರಿದ್ದರು.