ಸಂತ್ರಸ್ತ ರೈತರಿಂದ ಕಲ್ಲಂಗಡಿ ಖರೀದಿಸಿದ ಛಪ್ಪರಬಂದಿ ಪ್ರಭಾಕರ್ ಫೌಂಡೇಷನ್

ಕಲಬುರಗಿ.ಮೇ.19: ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಂದ ಕಲ್ಲಂಗಡಿ ಖರೀದಿಸಿ ತಮ್ಮ ಜೀವದ ಹಂಗು ತೊರೆದು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ನಗರದ ಪೊಲೀಸ್ ಸಿಬ್ಬಂದಿಗಳಿಗೆ ಕೊಡುವ ಮೂಲಕ ಇಲ್ಲಿನ ಛಪ್ಪರಬಂದಿ ಪ್ರಭಾಕರ ಫೌಂಡೇಷನ್ ಮಾನವೀಯತೆ ಮೆರೆಯಿತು.
ಫೌಂಡೇಷನ್ ಮುಖ್ಯಸ್ಥ ಶರಣರಾಜ್ ಛಪ್ಪರಬಂದಿ ಅವರು ಮಾತನಾಡಿ, ಬೇಸಿಗೆ ಧಗೆಯಲ್ಲಿ ತತ್ತರಿಸಿದ ಪೊಲೀಸ್ ಸಿಬ್ಬಂದಿಯವರಿಗೆ ಪೌಷ್ಠಿಕಾಂಶಭರಿತ ಕಲ್ಲಂಗಡಿ ಸೇವನೆ ಮಾಡುವುದರ ಜತೆಗೆ ಬೇಸಿಗೆ ಧಗೆಯಿಂದ ಸ್ವಲ್ಪ ಸುಧಾರಿಸಿಕೊಂಡಂತಾಗುತ್ತದೆ ಎಂದರು.
ಸಾಂಸ್ಕøತಿಕ ಸಂಘಟಕ ವಿಜಯಕುಮಾರ್ ತೇಗಲತಿಪ್ಪಿ ಅವರು ಮಾತನಾಡಿ, ಕರೊನಾ ಕುರಿತು ಭಯ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ಕ್ರಮ ಅನುಸರಿಸುವ ಮೂಲಕ ಈ ರೋಗದ ವಿರುದ್ಧ ಪ್ರತಿಯೊಬ್ಬರೂ ಹೋರಾಡಬೇಕು ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ಛಪ್ಪರಬಂದಿ ಪ್ರಭಾಕರ ಫೌಂಡೇಷನ್ ಕೊರೋನಾ ಸಂಕಷ್ಠಕ್ಕೊಳಗಾದ ಜನರ ಪರವಾಗಿ ಜನಮುಖಿಯಾಗಿ ಕಾರ್ಯ ಮಾಡುತ್ತಿದೆ ಎಂದರು.
ಕನ್ನಡ ಅಬಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ್ ಬಡಿಗೇರ್, ನ್ಯಾಯವಾದಿ ಹಣಮಂತರಾಯ್ ಅಟ್ಟೂರ್, ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಶಹಾಪುರಕರ್, ಶಿಕ್ಷಕ ಪ್ರಭುಲಿಂಗ್ ಮೂಲಗೆ, ಗುರುಶಾಂತ್ ಓಗಿ, ಸಮಗ್ರ ಅಭಿವೃದ್ಧಿ ಸಹಕಾರ ಬ್ಯಾಂಕಿನ ಅಧ್ಯಕ್ಷ ನಾಗೇಂದ್ರ ಉಮ್ಮರ್ಗಿ, ವಾಗ್ಮಿ ಸಂಗಮೇಶ್ ಶಾಸ್ತ್ರಿ ಮಾಶಾಳ್, ಪ್ರಮುಖರಾದ ಸುವರ್ಣಾ ಛಪ್ಪರಬಂದಿ, ಡಾ. ಗುರುರಾಜ್ ಛಪ್ಪರಬಂದಿ, ವಿನೋದ್ ಶಲಗಾರ್, ಗಗನ ಗಿಲ್ಡಾ, ವಿಷ್ಣು ಮೋರೆ, ಸಂದೀಪ್ ಗುಬ್ಬಿ ಮುಂತಾದವರು ಉಪಸ್ಥಿತರಿದ್ದರು.