ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ: ಚಂದ್ರಶೇಖರ ಪಾಟೀಲ ಹೊಚಕನಳ್ಳಿ

ಬೀದರ:ಜು.22:ಕಾರಂಜಾ ಸಂತ್ರಸ್ತ ರೈತರ ಅಹೋರಾತ್ರಿ ಧರಣಿಯು ಇಂದು ಇಪ್ಪತ್ತೊಂದನೇ ದಿನದಲ್ಲಿ ಸಾಗಿದರೂ ಆಡಳಿತ ಪಕ್ಷದ ಯಾರೊಬ್ಬ ಚುನಾಯಿತ ಪ್ರತಿನಿಧಿಗಳು ಈ ಕಡೆ ಗಮನಹರಿಸಿ, ಸಮಸ್ಯೆಗಳನ್ನು ಆಲಿಸದೇ ಇರುವುದು ಅವರ ಅಸಡ್ಡೆ ಹಾಗೂ ಅಹಂಕಾರವನ್ನು ತೋರಿಸುತ್ತದೆ. ಬರುವ ಸೋಮವಾರದ ವರೆಗೆ ಯಾವೊಬ್ಬ ಚುನಾಯಿತ ಜವಾಬ್ದಾರಿ ಪ್ರತಿನಿಧಿಗಳು ನಮ್ಮ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಗೆ ಸ್ಪಂದಿಸದೇ ಇದ್ದರೆ, ನಗರದ ಮುಖ್ಯ ರಸ್ತೆಗಳನ್ನು ಬಂದ್ ಮಾಡಿ, ಉಗ್ರ ಹೋರಾಟ ವನ್ನು ಮಾಡಬೇಕಾದೀತು ಎಂದು ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪಾಟೀಲವರು ಆಕ್ರೋಶಭರಿತರಾಗಿ ನುಡಿದರು. ಉಗ್ರ ಹೋರಾಟದ ವಿವಿಧ ರೂಪುರೇಷೆಗಳನ್ನು ವಿವರಿಸಿದ ಅವರು, ನಗರದ ಮುಖ್ಯ ರಸ್ತೆ ಗಳನ್ನು ಬಂದ್ ಮಾಡುವುದು, ಮಾನವ ಸರಪಳಿ, ಉರುಳು ಸೇವೆ ಗಳಂತಹ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರಿಂದಾಗುವ ಯಾವುದೇ ಅನಾಹುತಕ್ಕೆ ಸರಕಾರವೇ ನೇರವಾಗಿ ಜವಾಬ್ದಾರವಾಗುವುದು ಎಂಬ ಎಚ್ಚರಿಕೆಯನ್ನು ನೀಡಿದರು.

ನಿನ್ನೆ ಎಂ. ಎಲ್. ಸಿ. ಶ್ರೀ ಶಶೀಲ್ ಜಿ. ನಮೋಷಿಯವರು ಧರಣಿ ಸ್ಥಳಕ್ಕೆ ಆಗಮಿಸಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ತಾನು ಎರಡು ಬಾರಿ ಇಲ್ಲಿಂದಲೇ ಎಂ. ಎಲ್. ಸಿ.ಯಾಗಿ ಆಯ್ಕೆಯಾಗಿದ್ದು, ಕಾರಂಜಾ ಸಂತ್ರಸ್ತರ ಸಮಸ್ಯೆಗಳನ್ನು ತಿಳಿದಿದ್ದೇನೆ. ಬರುವ ದಿನಗಳಲ್ಲಿ, ಅಧಿವೇಶನದಲ್ಲಿ ವಿಷಯವನ್ನು ಚರ್ಚಿಸಿ, ಮುಖ್ಯ ಮಂತ್ರಿಯವರಿಗೆ ಸಮಸ್ಯೆಯ ಗಂಭೀರತೆಯನ್ನು ಮನದಟ್ಟು ಮಾಡುವೆ ಹಾಗೂ ಬೇಡಿಕೆಗಳನ್ನು ಈಡೇರಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ ಎನ್ನುವ ಭರವಸೆಯನ್ನು ನೀಡಿದರು.

ಕಲ್ಯಾಣ-ಕರ್ನಾಟಕ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಲಕ್ಷ್ಮಣ ದಸ್ತಿ, ಶಾಮರಾವ್ ಪ್ಯಾಟಿ, ಸಿದ್ಧಾರೆಡ್ಡಿ ಬಲಕಲ್, ಇದ್ದರು.

ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ನಾಗಶೆಟ್ಟಿ ಹಚ್ಚಿ, ನಿರ್ದೇಶಕ ಶ್ರೀ ವೀರಭದ್ರಪ್ಪ ಉಪ್ಪಿನ, ರೈತಸಂಘದ ಶ್ರೀ ದಯಾನಂದ ಸ್ವಾಮಿಯವರು ಮಾತನಾಡಿದರು.
ಶ್ರೀ ಶಿವಕುಮಾರ, ಸಂತೋಷ, ಶಿವರಾಜ್,  ವಿಶ್ವನಾಥ ಸ್ವಾಮಿ,   ಪ್ರಕಾಶ ಭೀಮರಾವ್  ಕರಬಸಪ್ಪ, ಚಂದ್ರಶೇಖರ ಮುತ್ತಣ್ಣ, ಹಣಮಂತರಾಯ, ಭೀಮರಾವ್, ಸೂರ್ಯಕಾಂತ, ಮೋಹನರಾವ್, ಶಿವರಾಜ್, ಬೀರಪ್ಪ, ಹನುಮಪ್ಪ, ಅಬ್ದುಲ್, ಶಂಕರಪ್ಪ, ವಿಜಯಕುಮಾರ್, ಹರೀಶ್, ರಾಜಪ್ಪ, ಅಶೋಕ ರೆಡ್ಡಿ, ಬಷವಂತರೆಡ್ಡಿ, ಭೀಮ ರೆಡ್ಡಿ, ರವೀಂದ್ರ, ಅನಿಲ್, ಸಂಜುಕುಮಾರ್, ರಫಿಯೋದ್ದೀನ್, ಬಸವರಾಜ್, ಮಲ್ಲಿಕಾರ್ಜುನ, ರಾಚಪ್ರಾ, ಸಿದ್ಧು ಪಾಟೀಲ,ಬಳಿರಾಮ್, ಸುಭಾಷ್, ಹಬೀಬ್, ರಾಜಶೇಖರ, ಹಾವಗಿರಾವ್, ಜಗನ್ನಾಥ, ಸುಧಾಕರ್ ಮುಂತಾದವರು ಭಾಗವಹಿಸಿದ್ದರು.