ಸಂತ್ರಸ್ತರ ಪರಿಹಾರಕ್ಕೆ ಜೆಡಿಎಸ್ ಆಗ್ರಹ

ಕಲಬುರಗಿ ನ 13: ಅತಿವೃಷ್ಠಿಯಿಂದ ಬೆಳೆ ಹಾನಿ ಮತ್ತು ಪ್ರವಾಹದಲ್ಲಿ ಸಿಲುಕಿ ಸಂಕಟ ಅನುಭವಿಸುತ್ತಿರುವ ಸಂತ್ರಸ್ತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡುವಂತೆ ಜಿಲ್ಲಾ ಜೆಡಿಎಸ್ ಪಕ್ಷ ಆಗ್ರಹಿಸಿದೆ.
ಪಕ್ಷದ ವತಿಯಿಂದ ಪ್ರತಿಭಟನಾ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಒಣಗಿಹೋದ ತೊಗರಿಬೆಳೆಯನ್ನು ಪಕ್ಷದ ಕಾರ್ಯಕರ್ತರು ಪ್ರದರ್ಶಿಸಿದರು
ಪ್ರತಿ ಎಕರೆಗೆ 25 ಸಾವಿರ ರೂ ಮತ್ತು ನೆರೆ ಹಾವಳಿಯಿಂದ ಜಲಾವೃತಗೊಂಡ ಗ್ರಾಮಸ್ಥರ ಪ್ರತಿ ಕುಟುಂಬಕ್ಕೆ 25 ಸಾವಿರ ರೂ ಪರಿಹಾರ ನೀಡಬೇಕು.ಭೀಮಾ,ಕಾಗಿಣಾ,ಅಮರಜಾ, ಮುಲ್ಲಾಮಾರಿ ನದಿಗಳ ಪ್ರವಾಹಕ್ಕೆ ಒಳಗಾದ ಗ್ರಾಮಗಳನ್ನು ಸ್ಥಳಾಂತರಿಸಿ ನವಗ್ರಾಮಗಳ ನಿರ್ಮಾಣ ಮಾಡಬೇಕು.ವಿದ್ಯುತ್ ದರ ಹೆಚ್ಚಳ ಆದೇಶ ಹಿಂಪಡೆಯಬೇಕು.ರಾಜ್ಯದಲ್ಲಿ 9 ನೆಯ ತರಗತಿಯಿಂದ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬಡಮಕ್ಕಳಿಗೆ ಉಚಿತ ಲ್ಯಾಪಟಾಪ್ ನೀಡಬೇಕು ಎಂಬ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನಾ ರ್ಯಾಲಿಯಲ್ಲಿ ಶಾಮರಾವ್ ಸೂರನ್, ಮನೋಹರ ಪೋದ್ದಾರ,ಶಂಕರ ಕಟ್ಟಿ ಸಂಗಾವಿ ಸೇರಿದಂತೆ ಅನೇಕರು ಪಾಲ್ಗೊಂಡರು.