ಸಂತ್ರಸ್ತರ ನೆರವಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

ಚಿಂಚೋಳಿ,ನ.4- ಇಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಾತ್ಯತೀತ ಜನತಾದಳ ಪಕ್ಷದ ನೇತೃತ್ವದಲ್ಲಿಂದು ಹೊಸಳ್ಳಿ ಕ್ರಾಸ್ ಹತ್ತಿರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಪಕ್ಷದ ತಾಲೂಕ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಅವರು, ಚಿಂಚೋಳಿ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ನೆರೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗೆ ಬಾರದ ಸರ್ಕಾರದ ಜನ ವಿರೋಧಿ ಧೋರಣೆಯನ್ನು ಖಂಡಿಸಿದರು.
ಮಳೆಯಿಂದ ಹಾಳಾಗಿರುವ ತಾಲೂಕಿನ ಗ್ರಾಮಗಳ ರಸ್ತೆಗಳ ದುರಸ್ಥಿಗೆ ಕೈಗೊಳ್ಳಬೇಕು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು, ತಾಲೂಕಿನ ಚಂದನಕೇರ ಗ್ರಾಮದಲ್ಲಿ ಸಿಡಿಲು ಬಡಿದು ಸಾವನಪ್ಪಿದ ಕುಟುಂಬಕ್ಕೆ ಇಲ್ಲಿಯವರೆಗೂ ಸರ್ಕಾರದಿಂದ ಪರಿಹಾರ ನೀಡಿಲ್ಲ. ತಕ್ಷಣವೇ ಸರ್ಕಾರ ಈ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ವಿವಿಧ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ನಾಗೇಂದ್ರ ಗುರಂಪಳ್ಳಿ. ಜೆಡಿಎಸ್ ಪಕ್ಷದ ಮುಖಂಡರಾದ ಓಮನರಾವ.ಕೊರವಿ. ಬಸವರಾಜ ವಾಡಿ.ಮಾಜೀದ ಪಟೇಲ್. ಹಣಮಂತ ಪೂಜಾರಿ. ರಾಮಣ್ಣಾಸುಂಕಾ. ಸಿದ್ದಯ್ಯಸ್ವಾಮಿ. ಗೌರಮ್ಮ. ಸೋಮಶೇಖರ ಐನೋಲಿ ಕರ್. ಎಸ್ಕೆ ಮುಕ್ತಾರ. ಮಂಜೂರ ಆಹ್ಮದ್. ಶ್ರೀಮಂತ. ರೇವಣಸಿದ್ಧ ಪೂಜಾರಿ. ಜಗದೀಶ್ ನಾಯಕ. ಸಂಗಮೇಶ ಪೆದ್ದಿ. ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.