ಸಂತ್ರಸ್ತರಿಗೆ ಸಿಗದ ಸಿ.ಎಂ ಪ್ಯಾಕೆಜ್ ಲಾಭ: ಜೆಡಿಎಸ್ ಪ್ರತಿಭಟನೆ

ಚಿಂಚೋಳಿ,ಮೇ.28- ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಲ್ಲಿನ ತಹಶಿಲ್ ಕಚೇರಿ ಎದುರು ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಕೈಗೊಳ್ಳಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಪಕ್ಷದ ತಾಲೂಕ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಅವರು, ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ರಾಜ್ಯದಲ್ಲಿ ತಾಂಡವ ಆಡುತ್ತಿರುವ ಕೋರೋನ ಮಹಾಮಾರಿ ನಿಯಂತ್ರಿಸುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಕೋವಿಡ್ ಲಾಕ್‍ಡೌನ್ ದಿಂದ ಸಂಕಷ್ಟದಲ್ಲಿರುವ ಜನರಿಗೆ ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿರುವುದಿಲ್ಲ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಘೋಷಿಸಿದ ಪ್ಯಾಕೆಜ್ ಸುಳ್ಳು ಮತ್ತು ಪೋಳಾಗಿದೆ ಎಂದರು.
ರಾಜ್ಯದ ಯಾರೊಬ್ಬರಿಗೂ ಈ ಪ್ಯಾಕೇಜ್ ಲಾಭ ಮತ್ತು ಸೌಲಭ್ಯ ದೊರೆತಿಲ್ಲ ಎಂದು ಅವರು ಖಂಡಿಸಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ವಿಫಲಾಗಿರುವ ಬಿಜೆಪಿ ರಾಜ್ಯ ಸರ್ಕಾರವನ್ನ ವಜಾ ಮಾಡುವಂತೆ ಅವರು ಆಗ್ರಹಿಸಿದರು.
ಕೋರೋನ ಸೋಂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಸಾಯ್ತಾ ಇದ್ದರೂ ಕೂಡ ರಾಜ್ಯದಲ್ಲಿ ಕೆಲ ಸಚಿವರು ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಮಾಡಬೇಕೆಂದು ದಿಲ್ಲಿಯಲ್ಲಿ ಕುಳಿತುಕೊಂಡು ರಾಜಕೀಯ ಮಾಡುತ್ತಿದ್ದಾರೆ.ಜನರು ಸಂಕಷ್ಟದಲ್ಲಿದ್ದರೂ ಕೂಡ ರಾಜ್ಯದ ಬಿಜೆಪಿ ಸಚಿವರು ಸಿಎಂ ಕುರ್ಚಿಗಾಗಿ ರಾಜಕೀಯ ಮಾಡುತ್ತಿದ್ದಾರೆ ಇದು ನಾಚಿಕೆಗೇಡಿ ವಿಷಯ.
ರಾಜ್ಯದ ರೈತರು ಅತಿ ಸಂಕಷ್ಟದಲ್ಲಿರುವ ರೈತರಿಗೆ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರು ಎರಡು ವರ್ಷದ ಹಿಂದೆ ಘೋಷಣೆ ಮಾಡಿದ ಒಂದು ಲಕ್ಷ ರೂಪಾಯಿ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದರು ಇನ್ನುವರೆಗೂ ಯಾವುದೋ ರೈತರಿಗೆ ಹಣ ಜಮಾ ಆಗಿಲ್ಲ. ಕೂಡಲೇ ಮುಖ್ಯಮಂತ್ರಿ ಘೋಷಣೆ ಮಾಡಿದ 1 ಲಕ್ಷ ಸಾಲ ರೈತರ ಅಕೌಂಟ್ಗೆ ಜಮಾ ಮಾಡಬೇಕು ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಿಸಿದರೆ ಚಿಂಚೋಳಿ ತಾಲೂಕಿನ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿಯನ್ನು ಸಹಾಯಧನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ
ಈ ಸಂದರ್ಭದಲ್ಲಿ. ಜೆಡಿಎಸ್ ಪಕ್ಷದ ಮುಖಂಡರಾದ ವಿಷ್ಣುಕಾಂತ್ ಮೂಲಗಿ. ಪುರಸಭೆ ಸದಸ್ಯರಾದ ನಾಗಿಂದ್ರಪ್ಪ ಗುರಂಪಳ್ಳಿ. ಬಸವರಾಜ್ ಸಿರಸಿ. ಹಣಮಂತ ಪೂಜಾರಿ. ಎಸ್. ಕೆ. ಮುಕ್ತಾರ್. ಚಂದ್ರಕಾಂತ ರೇವಗಿ. ಓಮನರಾವ ಕೊರವಿ. ಮಂಜೂರ್ ಅಹಮದ. ಸಿದ್ದು ಗುಬ್ಬಿ. ಮಗದುಮ ಖಾನ್. ಅವರು ತಹಸಿಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.