ಸಿರವಾರ.ಸೆ.೨೬- ಸತತವಾಗಿ ಸುರಿದ ಮಳೆಗೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ೧೬ ಜನ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ನೀಡುವ ಪರಿಹಾರ ನಿಧಿಯನ್ನು ಶಾಸಕ ಜಿ.ಹಂಪಯ್ಯ ನಾಯಕ ವಿತರಿಸಿದರು.
ಸತತವಾಗಿ ಸುರಿದ ಮಳೆಗೆ ಮಣ್ಣಿನ ಮನೆಗಳು, ಶೆಡ್‌ಗಳು ಬಿದ್ದು ಅಪಾರ ಹಾನಿ ಸಂಭವಿಸಿತ್ತು. ಮಳೆಯಿಂದಾಗಿ ಮನೆ ಕಳೆದುಕೊಂಡ ೧೬ ಸಂತ್ರಸ್ತರಿಗೆ ತಲಾ ೫೦ ಸಾವಿರ ರೂ.ಗಳ ಪರಿಹಾರದ ನಿಧಿಯನ್ನು ವಿತರಿಸಲಾಯಿತು.
ತಹಶೀಲ್ದಾರ ರವಿ.ಎಸ್ ಅಂಗಡಿ, ಕಂದಾಯ ಅಧಿಕಾರಿ ಶ್ರೀನಾಥ, ಗ್ರಾಮ ಲೆಕ್ಕಾಧಿಕಾರಿ ವಿಲ್ಸನ್ ಕುಮಾರ, ಮುಖಂಡರಾದ ಚುಕ್ಕಿ ಉಮಾಪತಿ, ಅರಿಕೇರಿ ಶಿವಶರಣ, ಎಚ್.ಕೆ.ಅಮರೇಶ, ಪಟ್ಟಣ ಪಂಚಾಯತಿ ಸದಸ್ಯರಾದ ವೈ.ಭೂಪನಗೌಡ, ಮಹ್ಮದ್ ಮೌಲಸಾಬ್ ವರ್ಚಸ್, ಸೂರಿ ದುರುಗಣ್ಣ ನಾಯಕ, ಹಾಜಿ ಚೌದ್ರಿ, ಎಚ್.ಮಾರ್ಕಂಡಪ್ಪ, ಹಸೇನಲಿ ಸಾಬ್, ಮುಖಂಡರಾದ ಗಡ್ಲ ಬಸವರಾಜ, ಗಡ್ಲ ಚನ್ನಬಸವ, ಬಸವರಾಜ ಬೆಣ್ಣಿ, ಜಯಪ್ಪ ಕೆಂಪು, ಅಬ್ರಹಾಂ ಹೊನ್ನುಟಗಿ, ಚನ್ನಪ್ಪ ಬೂದಿನಾಳ ಸೇರಿದಂತೆ ಇತರರು ಇದ್ದರು.