ಸಂತ್ರಸ್ತರಿಗೆ ಆರ್ಥಿಕ ನೆರವು

ಹುಮನಾಬಾದ್: ಜೂ.28:ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಪ್ರಮಾಣದ ಮಳೆಗೆ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಮಹಮದ್ ಹಫೀಜ್ ಮನೆ ಕುಸಿದು ಬಿದ್ದ ಹಿನ್ನಲೆ ಕುಟುಂಬ ಸದಸ್ಯರಿಗೆ ಬುದ್ಧ ಬಸವ ಅಂಬೇಡ್ಕರ್ ಟ್ರಸ್ಟ್ನ ಅಧ್ಯಕ್ಷ ಶಿವಕುಮಾರ ಸ್ವಾಮಿ ಹತ್ತು ಸಾವಿರದ ಧನ ಸಹಾಯ ಚಕ್ ವಿತರಿಸಿದರು.
ಬುದ್ಧ ಬಸವ ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ ಸ್ವಾಮಿ ಮಾತನಾಡಿ, ಶನಿವಾರ ಸುರಿದ ಮಳೆಗೆ ಮೊಳಕೇರಾ ಗ್ರಾಮದ ದಿ. ಮಹಮದ್ ಹಫೀಜ್ ಮನೆ ಗೋಡೆ ಕುಸಿದು ಬಿದ್ದ ಹಿನ್ನಲೆ ಅವರ ಕುಟುಂಬ ನಿರ್ವಹಣೆಗಾಗಿ ದಿ. ಮಹಮದ್ ಹಫೀಜ್ ಅವರ ಪತ್ನಿ ಮಮತಾಜ್ ಬೇಗಂಗೆ ಹತ್ತು ಸಾವಿರ ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದರು.
ಪ್ರಮುಖರಾದ ಅಂಕುಶ್ ಬಾವಗೆ, ಮುಖೇಶ್ ಹುಪ್ಲೆ, ವೀರೇಶ್ ಶ್ರೀಗಿರಿ, ಸುನೀಲ್ ಹೀರೊಳೆ, ಆತ್ಮನಂದ ಮರಗೊತ್ತಿ, ಸುನೀಲ್ ಔರಾದ್ಕರ್, ಪ್ರಭು ಸಕ್ರೆ, ಭರತ್ ಸಿಂಧೆ, ವೈಜೀನಾಥ ಬಂಡೆನೋರ್, ಲಕ್ಷ್ಮಿಕಾಂತ ಜಮಾದಾರ, ಪರಮಣ್ಣ ಲಿಂಗಸೂರ್, ಜಗನಾಥ್ ಸ್ವಾಮಿ, ಸಂತೋಷ ಮಡಿವಾಳ ಸಿರಾಜ್ ಇದ್ದರು.