ಸಂತೋಷ, ಸಮತೋಲನದ ಮನಸ್ಸೇ ಸ್ವರ್ಗ: ಹಾರಕೂಡ ಶ್ರೀ

Oplus_131072

ಬೀದರ್:ಜೂ.5: ಯಾವಾಗಲೂ ಸಂತೋಷ ಹಾಗೂ ಸಮತೋಲನದಿಂದ ಕೂಡಿರುವ ಮನಸ್ಸೆ ಸ್ವರ್ಗ, ಜೀವನದಲ್ಲಿ ಸಮಚಿತ್ತ ಹಾಗೂ ಸ್ಥಿತ ಪ್ರಜ್ಞೆ ಕಾಯ್ದುಕೊಳ್ಳುವನು ಸಮಾಧಾನವಾಗಿರುತ್ತಾನೆ ಎಂದು ಹಾರಕೂಡ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹತ್ಯಾಳ ಗ್ರಾಮದಲ್ಲಿ ಗ್ರಾಮಸ್ಥರಿಂದ ಆಯೋಜಿಸಲ್ಪಟ್ಟ ಭಕ್ತಿ ನಮನ ಹಾಗೂ 654ನೇ ತುಲಾಭಾರ ಸಮಾರಂಭದ ಸಾನಿಧ್ಯ ವಹಿಸಿದ ಶ್ರೀಗಳು, ಬೇರೆಯವರ ಒಳತಿನಲ್ಲಿಯೇ ತನ್ನ ಒಳಿತು ಅಡಿಗಿದೆ ಎನ್ನುವ ತಿಳುವಳಿಕೆ ಹಾಗೂ ಆ ನಿಟ್ಟಿನ ನಡುವಳಿಕಯೇ ನಿಜವಾದ ಸಂಸ್ಕøತಿ.
ಶ್ರೀಗಂಧದ ತರುಗಳು ತೀಡಿದಷ್ಟು ಪರಿಮಳ ಹೆಚ್ಚುವಂತೆ, ಭಕ್ತಿ ಶ್ರದ್ಧೆಯಿಂದ ಸತ್ಕಾರ್ಯಗಳು ಮಾಡಿದಷ್ಟು ಸತ್ಫಲಗಳ ರಾಶಿ ಹೆಚ್ಚುತ್ತದೆ.
ಮನಶುದ್ದಿಯಿಂದ ಕಾಯಕ ಶುದ್ದಿ, ಕಾಯಕ ಶುದ್ಧಿಯಿಂದ ಧನ ಶುದ್ದಿ, ಧನ ಶುದ್ಧಿಯಿಂದ ಇಡೀ ಸಮಾಜ ಶುದ್ದಿಯಾಗುವ ಪ್ರಕ್ರಿಯೆ ಅದ್ಭುತವಾದದು, ಹಾಗಾಗಿ ಪರಿಶುದ್ಧತೆ ಎನ್ನುವುದು ಆರೋಗ್ಯಪೂರ್ಣ ಸಮಾಜದ ಆತ್ಮವೆಂದೇ ಹೇಳಬೇಕಾಗುತ್ತದೆ.
ಹತ್ಯಾಳ ಗ್ರಾಮಸ್ಥರ ಭಕ್ತಿ ಅನನ್ಯವಾಗಿದ್ದು, ಭಗವಂತನ ಕೃಪಾಗಂಗೆ ಹರಿದು ಬರಲಿ ಎಂದು ಹಾರೈಸಿದರು.
ಸಿದ್ರಾಮಪ್ಪ ಗುದಗೆ ದಾಸರತ ಪಾಟೀಲ, ಮಹೇಶ ಮೂಳೆ, ಜಗನ್ನಾಥ ಅಡೆ ಸಿದ್ರಾಮ ಮೂಳೆ, ವೀರಪ್ಪ ಭುಜಂಗೆ ಉಪಸ್ಥಿತರಿದ್ದರು.
ಸಂತೋಷ ಪಾಟೀಲ ಸ್ವಾಗತಿಸಿದರು.
ಭೀವಾಜಿ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು.
ಸಿದ್ರಾಮ ಭುಜಂಗೆ ವಂದಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿ ಕೊಟ್ಟರು.
ಇದಕ್ಕೂ ಮೊದಲು ಗ್ರಾಮದ ಹೊರವಲಯದಿಂದ ಹನುಮಾನ ಮಂದಿರದವರೆಗೆ ಸಾರೋಟಿನಲ್ಲಿ ಹಾರಕೂಡ ಪೂಜ್ಯರ ಮೆರವಣಿಗೆ ಜರುಗಿತು.