ಸಂತೋಷ ಶೆಟ್ಟಿಗೆ ಸದ್ಭಾವನಾ ಪ್ರಶಸ್ತಿ

ಹುಬ್ಬಳ್ಳಿ, ಮಾ 20 : ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿ ಹಾಗೂ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಆಶ್ರಯದಲ್ಲಿ ಜರುಗಿದ ಯೋಗ ಭಾರತ ಸಾಂಸ್ಕೃತಿಕ ಉತ್ಸವ ಮತ್ತು ಸಾಂಸ್ಕೃತಿಕ ಪ್ರತಿಭೋತ್ಸವ ಸಮಾರಂಭದಲ್ಲಿ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿಯನ್ನು ಹುಬ್ಬಳ್ಳಿಯ ಸಮಾಜ ಸೇವಕ ಹಾಗೂ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಸಂತೋಷ ಆರ್. ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.
ಹೆಗ್ಗುಂದ ವನಕಲ್ಲು ಮಲ್ಲೇಶ್ವರ ಸುಕ್ಷೇತ್ರದ ಶ್ರೀ ಬಸವರಮಾನಂದ ಸ್ವಾಮೀಜಿ, ಉಡುಪಿ ಶ್ರೀದಿರ್ಗಾ ಶಕ್ತಿ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ರಮಾನಂದ ಗುರೂಜಿ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಚಲನಚಿತ್ರ ನಿರ್ದೇಶಕ ರಮೇಶ ಸುರ್ವೆ, ಪತ್ರಿಕಾ ಛಾಯಾಗ್ರಹಕ ದೇವೆಂದ್ರಕುಮಾರ ನಿಗಡೆ, ಸುರ್ವೇ ಪತ್ರಿಕೆ ಸಂಪಾದಕ ಕಿಶನ ಸುರ್ವೆ , ಮಾಜಿ ಸಚಿವ ಶಶಿಕಾಂತ ನಾಯಕ, ಶಾಸಕರಾದ ಅಮರೇಗೌಡ ಬಯ್ಯಾಪುರ, ಟಿ.ರಘುಮೂರ್ತಿ, ಹಿರಿಯ ವಾಗ್ಮಿ ಡಾ. ಚಿಕ್ಕಹೆಜ್ಜಾಜಿ ಮಾದೇವ, ಹಿರಿಯ ಸಾಹಿತಿ ಮಧು ಬಿಲ್ಲನಕೋಟೆ, ಕಸಾಪ ರಾಜ್ಯಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಚಲನಚಿತ್ರ ಕಲಾವಿದರಾದ ಗಣೇಶರಾವ್ ಕೇಸ್ಕರ್, ಶಂಕರ್ ಭಟ್, ಮೀಣಾ, ಡಿ.ವಿ ಸೌಜನ್ಯ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತಾ ಸೇರಿದಂತೆ ವಿವಿಧ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.