ಸಂತೋಷ ಲಾಡ್ ಕಾರ್ಯ ಶ್ಲ್ಯಾಘನೀಯ

?????????????

ಅಳ್ನಾವರ,ಜೂ11: ಕೋವಿಡ್ ಕಾಲದಲ್ಲಿ ಕೆಲಸ ಇಲ್ಲದೆ ಹಸಿವಿನಿಂದ ಯಾರು ಬಳಲಬಾರದು ಎಂಬ ಉದ್ದೇಶದಿಂದ ಮಾಜಿ ಸಚಿವ ಸಂತೋಷ ಲಾಡ್ ಅವರು ಬಿಸಿ ಬಿಸಿಯಾದ ಫಲಾವ ಇರುವ ಊಟದ ಪೊಟ್ಟಣ ವಿತರಿಸುತ್ತಿದ್ದು. ಅವರ ಕಾರ್ಯ ಶ್ಲಾಘನೀಯ ಎಂದು ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ರೂಪೇಶ ಗುಂಡಕಲ್ ಹೇಳಿದರು.
ಗುರುವಾರ ಮಧ್ಯಾಹ್ನ ಪಟ್ಟಣದ ಆಜಾಧ ರಸ್ತೆಯಲ್ಲಿನ ಸಂತೋಷ ಲಾಡ್ ಅವರ ಜನ ಸಂಪರ್ಕ ಕಾರ್ಯಾಲಯದಲ್ಲಿ ತೆರೆದ ಕ್ಯಾಂಟಿನ್‍ನಲ್ಲಿ ಜನರಿಗೆ ಊಟದ ಪೊಟ್ಟಣ ನೀಡಿ ಅವರು ಮಾತನಾಡಿ, ಜನರ ಸಂಕಷ್ಟದಲ್ಲಿ ಭಾಗಿಯಾಗುವ ಮೂಲಕ ಲಾಡ್ ಮಾನವೀಯತೆ ತೋರಿದ್ದಾರೆ ಎಂದರು.
ಪ್ರಸ್ತುತ್ ಸಮಾಜದಲ್ಲಿ ಗಾಡವಾಗಿ ಆವರಿಸಿರುವ ಕೋವಿಡ್ ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದೆ. ಲಾಕ್‍ಡೌನ್ ಹಿನ್ನಲೆಯಲ್ಲಿ ಕೆಲಸ ಇಲ್ಲದೆ ಸಾಕಷ್ಟು ಕೂಲಿ ಕಾರ್ಮಿಕರು, ಸಾರ್ವಜನಿಕರು, ಬಡವರು ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ. ಅವರ ಹಸಿದ ಹೊಟ್ಟೆ ತಣ್ಣಗಾಗಿರಲಿ ಎಂದು ಊಟ ನೀಡಲಾಗುತ್ತಿದೆ. ಇದು ಇತರರಿಗೆ ಮಾದರಿಯಾಗಿದೆ ಎಂದರು.
ಜನರು ಸಾಲು ಗಟ್ಟಿ ನಿಂತು ಫಲಾವ್ ಊಟದ ಪಾಕೀಟ್ ಸ್ವೀಕರಿಸಿದರು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ದರಿಸಿದ್ದರು. ರುಚಿಯಾದ ಊಟ ನಿತ್ಯ ನೀಡಲಾಗುವದು, ಇದು ಹಲವು ಜನರ ಹಸಿವು ಇಂಗಿಸಲಿದೆ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ರಮೇಶ ಕುನ್ನೂರಕರ ಹೇಳಿದರು.
ಶ್ರೀಕಾಂತ ಗಾಯಕವಾಡ, ಮಂಜುನಾಥ ಕೊಳೆನ್ನವರ, ಕೆಪಿಸಿಸಿ ಸದಸ್ಯ ಅನ್ವರಖಾನ ಬಾಗೇವಾಡಿ, ಹಸನಅಲಿ ಶೇಖ, ಹನಮಂತ ಶಿಂದೆ, ಸತ್ತಾರ ಬಾತಖಂಡಿ, ಆಕಾಶ ಜನಕಾಟಿ, ಗಜಾನನ ಚಲವಾದಿ, ಮನೋಹರ ಬಡಸ್ಕರ್, ದಾವಲ ತಹಶೀಲ್ದಾರ್ ಇದ್ದರು.