
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೫:ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಮಧ್ಯೆ ವಾಕ್ಸಮರ ನಡೆದಿದ್ದು, ಉದಯನಿಧಿ ಮಾತಿಗೆ
ಬಿ.ಎಲ್. ಸಂತೋಷ್ ಕೆಲವರಿಗೆ ಸೋಂಕು ಇದೆ, ಚಿಕಿತ್ಸೆ ಬೇಕಾಗಿದೆ ಎಂದು ಮಾಡಿದ್ದ ಟ್ವೀಟ್‌ಗೆ ಪ್ರಿಯಾಂಕ ಖರ್ಗೆ ಅವರು ಸೋಂಕು ಇರುವುದನ್ನು ನೀವು ಒಪ್ಪಿಕೊಂಡಿದ್ದೀರಿ. ಸಾವಿರಾರು ವರ್ಷಗಳಿಂದ ಅನೇಕ ಸೋಂಕುಗಳಿವೆ ಮತ್ತು ಈಗಲೂ ಪ್ರಚಲಿತದಲ್ಲಿದ್ದು, ಮನುಷ್ಯೆರ ನಡುವೆ ತಾರತಮ್ಯವನ್ನು ಮಾಡುತ್ತಿದೆ ಎಂದು ಪ್ರಿಯಾಂಕ ಖರ್ಗೆ ಬಿ.ಎಲ್ ಸಂತೋಷ್ ಟ್ವೀಟ್‌ಗೆ ತಿರುಗೇಟು ನೀಡಿದ್ದಾರೆ.ಸಮಾಜದಲ್ಲಿ ಮಾನವನ ಘನತೆಂiiನ್ನು ಕಡಿಮೆ ಮಾಡುವ ತಾರತಮ್ಯವನ್ನು ಹುಟ್ಟು ಹಾಕಿದವರು ಯಾರು? ಇನ್ನೊಬ್ಬರಿಗಿಂದ ಹೆಚ್ಚು ನೀತಿವಂತರನ್ನಾಗಿ ಮಾಡುವುದು ಯಾವುದು, ಜಾತಿಯಾಧಾರದ ಮೇಲೆ ನಮ್ಮನ್ನು ವಿಭಜಿಸಿದವರು ಯಾರು, ಸಮಾಜದಲ್ಲಿ ಕೆಲ ಜನರು ಯಾಕೆ ಅಸ್ಪೃಶ್ಯರಾಗಿದ್ದಾರೆ. ಈ ಅಸ್ಪೃಶ್ಯರು ಈಗಲೂ ದೇವಸ್ಥಾನಗಳನ್ನು ಏಕೆ ಪ್ರವೇಶಿಸಬಾರದು, ಮಹಿಳೆಯರ ಕೀಳು ಸ್ಥಿತಿ ಆಚರಣೆಯನ್ನು ಯಾರು ಮಾಡಿದರು, ಅಸಮಾನ ಮತ್ತು ದಮನಕಾರಿಯಾದ ಜಾತಿ ವ್ಯವಸ್ಥೆಯಲ್ಲಿ ಯಾರು ಸಿದ್ಧರು ಎಂದು ಖರ್ಗೆ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.ನಾನು ನಿಮ್ಮಷ್ಟು ಬುದ್ಧಿವಂತನಲ್ಲ, ನನಗೆ ಜ್ಞಾನೋದಯ ಮಾಡಿ ಸಮಾಜದಲ್ಲಿ ಇಂತಹ ನಿಯಮಗಳನ್ನು ಯಾರು ಹಾಕಿದರು ಎಂದು ಖರ್ಗೆ ಟ್ವೀಟ್‌ನಲ್ಲಿ ಬಿ.ಎಲ್ ಸಂತೋಷ್‌ರವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.ವಿಶ್ವಗುರು ಬಸವಣ್ಣನವರ ’ಇವನಾರವ ಇವನಾರವ ಇವ ನಮ್ಮವ’ ಎಂಬ ವಚನದ ಜತೆಗೆ ದಯವೇ ಧರ್ಮದ ಮೂಲವೆಂಬ ವಚನವನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ಪ್ರಿಯಾಂಕ ಖರ್ಗೆ ಬಸವಣ್ಣನವರ ಈ ತತ್ವವನ್ನು ಪ್ರಚುರ ಪಡಿಸುವ ಮೂಲಕ ಸಮಸಮಾಜ ನಿರ್ಮಾಣ ಮಾಡಬಹುದು ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.