ಸಂತೋಷ್ ಕುಮಾರ್‍ರಿಂದ ಮುಸಲ್ಮಾನ ಬಾಂಧವರಿಗೆ ಬಕ್ರೀದ್ ಶುಭಾಶಯ

ಕೆ.ಆರ್.ಪೇಟೆ.ಜು.11: ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ಆಚರಣೆ ಪ್ರಯುಕ್ತ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಯುವ ಮುಖಂಡರು ಹಾಗೂ ಪುರಸಭಾ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್(ಬಸ್) ತಮ್ಮ ಬೆಂಬಲಿಗರೊಂದಿಗೆ ಪಟ್ಟಣ ಸೇರಿದಂತೆ ಹೊಸಹೊಳಲು, ಕಿಕ್ಕೇರಿ, ಆಲಂಬಾಡಿ ಕಾವಲು, ಮಂದಗೆರೆಯಲ್ಲಿರುವ ಮುಸಲ್ಮಾನ ಸಮುದಾಯದ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಿ, ಮುಸಲ್ಮಾನ ಬಾಂಧವರಿಗೆ ಶುಭಾಶಯ ಕೋರಿ ಸಿಹಿ ವಿತರಿಸಿದರು.
ಬಳಿಕ ಮಾತನಾಡಿದ ಸಂತೋಷ್ ಕುಮಾರ್, ಈ ಪವಿತ್ರವಾದ ಬಕ್ರೀದ್ ಹಬ್ಬವು ಮುಸಲ್ಮಾನ ಬಾಂಧವರಿಗೆಲ್ಲರಿಗೂ ಒಳಿತನ್ನುಂಟುಮಾಡಲಿ.
ತಾಲ್ಲೂಕಿನಲ್ಲಿ ಮುಸ್ಲಿಂ ಬಂಧುಗಳು ಹಾಗೂ ಹಿಂದೂಗಳು ಪರಸ್ಪರ ಸಹೋದರರಂತೆ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ.
ಹಿಂದೂ-ಮುಸಲ್ಮಾನ ಬಾಂಧವ್ಯ ಹೀಗೆಯೇ ಮುಂದುವರಿಯಬೇಕು. ಯಾವುದೇ ಕಷ್ಟ ಸುಖಗಳಿಗೆ ಕೈಲಾದ ಸಹಕಾರ ನೀಡಲು ನಾನು ಸದಾ ಸಿದ್ಧ ಎಂದು ಹೇಳಿದರು.