
ಬೀದರ್: ಎ.21:ಬೀದರ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ ಸಂತೋಷಿಮಾತಾ ಚಂದ್ರಕಾಂತ ಅವರ ಪ್ರೌಢ ಪ್ರಬಂಧಕ್ಕೆ ರಾಜಸ್ಥಾನದ ಚೂರು ಒಪಿಜೆಎಸ್ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ನೀಡಿದೆ.
ಸಂತೋಷಿಮಾತಾ ಅವರು ಡಾ. ಅಶ್ವಾನಿ ನಾಗಪಾಲ್ ಅವರ ಮಾರ್ಗದರ್ಶನದಲ್ಲಿ ‘ಪ್ಯಾರಾಮೀಟರ್ ರಿಲೆಟೆಡ್ ಟು ದಿ ವೀಕ್ ಕಾಂಸ್ಟ್ರೈನ್ತ್ ವರಿಯೆಷನಲ್ ಡೇಟಾ ಅಸ್ಸಿಮಿಲೇಷನ್ ಪ್ರಾಬ್ಲಮ್ ಫಾರ್ ನ್ಯೂಮೆರಿಕಾಲ್ ವೀಥರ್ ಪ್ರೆಡಿಕ್ಶನ್: ಎ ಕ್ರಿಟಿಕಲ್ ಸ್ಟಡಿ’ ಕುರಿತು ಪ್ರೌಢ ಪ್ರಬಂಧ ಮಂಡಿಸಿದ್ದರು.
ಸಂತೋಷಿಮಾತಾ ಅವರಿಗೆ ಪಿಎಚ್‍ಡಿ ಪದವಿ ದೊರೆತಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.