ಸಂತೋಷಲಾಡ್ ಫೌಂಡೇಶನ್ ನಿಂದ ಬಡಮಕ್ಕಳಿಗೆ ಬಟ್ಟೆ ವಿತರಣೆ

ಕೂಡ್ಲಿಗಿ.ನ.4 :- ದೀಪಗಳ ಹಬ್ಬ ದೀಪಾವಳಿ ಬಡ ಮಕ್ಕಳಿಗೂ ಉತ್ಸಾಹ ತರಲಿ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಸಂತೋಷಲಾಡ್ ಫೌಂಡೇಶನ್ ವತಿಯಿಂದ ಇಂದು ಮಧ್ಯಾಹ್ನ ಕೂಡ್ಲಿಗಿ ಪಟ್ಟಣದ ಉಡಸಲಮ್ಮನಕಟ್ಟೆಯ ಮೇಲಿರುವ ಮನೆಗಳ ಬಡಕುಟುಂಬದ 50ಮಕ್ಕಳಿಗೆ ಹೊಸ ಬಟ್ಟೆ ವಿತರಿಸಿದರು.
ಕೆಲ ಬಡ ಮಕ್ಕಳಿಗೆ ತಾವೇ ಬಟ್ಟೆ ತೊಡಿಸಿ ಕಾಂಗ್ರೆಸ್ ನ ಯೂತ್ ಜಿಲ್ಲಾಧ್ಯಕ್ಷ ಸಿದ್ದು ಹಳ್ಳೇಗೌಡ ಮಕ್ಕಳೊಂದಿಗೆ ಸಂಭ್ರಮಿಸಿದರು ಸಂತೋಷ ಲಾಡ್ ಫೌಂಡೇಶನ್ ಈ ಬಾರಿಯ ದೀಪಾವಳಿ ಹಬ್ಬವನ್ನು ಬಡಮಕ್ಕಳಿಗೆ ಹೊಸಬಟ್ಟೆ ವಿತರಿಸುವ ಮೂಲಕ ವಿಶಿಷ್ಟ ರೀತಿ ಆಚರಿಸಿತು.
ಈ ಸಂದರ್ಭದಲ್ಲಿ ಸಂತೋಷ ಲಾಡ್ ಫೌಂಡೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.