ಸಂತೆ ಹರಾಜು – ತಿಮ್ಮಪ್ಪ ಜಗ್ಲಿ

ಸಿರವಾರ.ಫೆ.೨೩- ಪಟ್ಟಣ ವ್ಯಾಪ್ತಿಯಲ್ಲಿ ಸಂತೆ, ಬೀದಿ ಬದಿ ಮಾಡುವ ವಿವಿಧ ವ್ಯಾಪಾರಸ್ಥರಿಂದ ಕರ ವಸೂಲಿ ಮಾಡುವುದಕ್ಕಾಗಿ (೧-೪-೨೦೨೪ ರಿಂದ ೩೧-೦೩-೨೦೨೫) ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ೭ ಜನ ಭಾಗವಹಿಸಿದರು.
ಅದರಲ್ಲಿ ವಾರದ ಸಂತೆಗೆ ೮,೪೬,೦೦೦ ವನ್ನು ರಮೇಶ ನಾಯಕ ಕೂಗುವ ಮೂಲಕ ತಮ್ಮದಾಗಿಸಿ ಕೊಂಡಿದ್ದಾರೆ.
ಅದೆ ರೀತಿ ದಿನದ ಸಂತೆ ಹರಾಜನ್ನು ಎಂ.ಮನೋಹರ ೪,೦೬,೫೦೦ ರೂ.ಕೂಗುವ ಮೂಲಕ ತಮ್ಮದಾಗಿಸಿಕೊಂಡದ್ದಾರೆ ಎಂದು ಪ.ಪಂಚಾಯತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಘೋಷಣೆ ಮಾಡಿದರು.