
ರೋಣ,ಮೇ5 : ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂಬ ಉದ್ದೇಶ ದಿಂದ ಜಿಲ್ಲಾ ಸ್ವೀಪ ಸಮಿತಿ ಹಾಗೂ ತಾಲೂಕ ಸ್ವೀಪ್ ಸಮಿತಿಯಿಂದ ಸಂತೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರೋಣ ಪಟ್ಟಣದಲ್ಲಿ ನಡೆದ ಕಾಯಿಪಲ್ಯ ಮಾರ್ಕೆಟ್ ನಲ್ಲಿ ರೋಣ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳ ನೇತ್ರತ್ವದಲ್ಲಿ ತಾಲೂಕ ಪಂಚಾಯತ ಸಿಬ್ಬಂದಿಗಳೊಂದಿಗೆ ಮತದಾನ ಜಾಗೃತಿ ನಡೆಸಿ ಕಡ್ಡಾಯ ಮತದಾನಕ್ಕೆ ಪ್ರೇರೇಪಿಸಲಾಯಿತು.
ಈ ವೇಳೆ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರವಿ.ಎ.ಎನ್ ಮಾತನಾಡಿ, ಮತದಾನದ ದಿನ ಸಮೀಪ ಬಂದಿದೆ ಎಲ್ಲರೂ ತಪ್ಪದೇ ಮತದಾನ ಮಾಡಿ.
ವ್ಯವಸ್ಥಿತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಮತದಾನ ಮಾಡಬೇಕು. ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ನೈತಿಕವಾಗಿ ಚಲಾಯಿಸುವುದು ನಮ್ಮ ಗುರುತರವಾದ ಜವಾಬ್ದಾರಿ ಯಾಗಿದೆ. ಮೇ.10 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಹೇಳಿದರು.
ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಪ್ರಬಲವಾದ ಅಸ್ತ್ರವಾಗಿದೆ. ಒಂದು ಮತವೂ ಕೂಡ ಅತ್ಯಮೂಲ್ಯವಾಗಿದ್ದು, ಮತದಾನ ಮಾಡುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಮ್ಯಾನೇಜರ್ ದೇವರಾಜ ಪಾಟೀಲ, ಅಕ್ಷರ ದಾಸೋಹದ ಸಹಾಯಕ ನಿರ್ದೆಶಕ ಬಸವರಾಜ ಅಂಗಡಿ,
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ತಾಲೂಕ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.