ಸಂತೆಯಲ್ಲಿ ಸಾಮಾಜಿಕ ಅಂತರ ಮಾಯೆ

ಮಸ್ಕಿ.ಏ.೨೭-ಕಿಲ್ಲರ್ ಕರೂನಾ ಹರಡದಂತೆ ತಡೆಯಲು ಸರಕಾರ ವಿಕೇಂಡ್ ಲಾಕ್‌ಡೌನ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ ಜನರನ್ನು ಮನೆ ಬಿಟ್ಟು ಹೊರ ಬರದಂತೆ ತಡೆಯಲು ಪೊಲೀಸ್, ಪುರಸಭೆ ಅಧಿಕಾರಿಗಳು ಹರ ಸಾಹಸ ಪಡುತ್ತಿದ್ದಾರೆ.
ವಾರದ ಸಂತೆ ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಇಲ್ಲಿಯ ಡಾ.ಖಲೀಲ್ ವೃತ್ತ, ಬಳಿ ಬೆಳಗ್ಗೆಯಿಂದ ೧೦ ಗಂಟೆ ವರೆಗೆ ತರಕಾರಿ ಮಾರಾಟಕ್ಕೆ ಅನುವು ಮಾಡಿ ಕೊಡಲಾಗಿತ್ತು ವಾರದ ಸಂತೆಗೆ ಬಂದ ಜನ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ತರಕಾರಿ ಖರೀದಿ ಸುತ್ತಿರುವ ದೃಶ್ಯ ಕಂಡು ಬಂತು. ವಾರದ ಸಂತೆಯಲ್ಲಿ ಕೂರೂನಾ ನಿಯಮಗಳು ಅಯೋಮಯ ವಾಗಿದ್ದವು ಕಿರಾಣಿ, ತರಕಾರಿ ಮಾರಾಟ ಮಳಿಗೆಗಳ ಬಳಿ ಖರೀದಿಗೆ ಬಂದಿದ್ದ ಗ್ರಾಹಕರನ್ನು ಸಾಮಾಜಿಕ ಅಂತರ ಕಾಯ್ದು ಕೊಂಡು ನಿಲ್ಲುವಂತೆ ಪುರಸಭೆ ಅಧಿಕಾರಿ, ಪೊಲೀಸರು ಮನವಿ ಮಾಡುತ್ತಿರುವ ದೃಶ್ಯ ಕಿರಾಣಿ ಅಂಗಡಿಗಳ ಬಳಿ ಭಾನುವಾರ ಕಂಡು ಬಂತು.
ಲಾಕ್ ಡೌನ್ ಆದೇಶ ಪಾಲಿಸುವಂತೆ ಪುರಸಭೆ, ಪೊಲೀಸ್ ಅಧಿಕಾರಿಗಳು ವಾಹನಗಳಿಗೆ ಮೈಕ್ ಕಟ್ಟಿ ಕೊಂಡು ಗಲ್ಲಿ, ಗಲ್ಲಿ ಸುತ್ತಾಡಿ ಮನೆ ಬಿಟ್ಟು ಹೊರ ಬರಬೇಡಿ ಅಗತ್ಯ ವಸ್ತುಗಳ ಖರೀದಿಗೆ ಮಾಸ್ಕ್ ಹಾಕಿ ಕೊಂಡು ಬನ್ನಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಿ ಎಂದು ಮನವಿ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಸಂತೆಗೆ ಬಂದಿದ್ದ ಬಹತೇಖ ಜನರ ಮುಖದಲ್ಲಿ ಮಾಸ್ಕ್ ಕಂಡು ಬರಲಿಲ್ಲ. ಪೊಲೀಸರು, ಪುರಸಭೆ ಅಧಿಕಾರಿಗಳು ಸಾಮಾಜಿಕ ಅಂತರ ಮಹತ್ವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿಲು ಹರ ಸಾಹಸ ಪಡುತ್ತಿದ್ದಾರೆ ಅನಗತ್ಯ ಓಡಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.