ಸಂತೆಯಲ್ಲಿ ಸಾಮಾಜಿಕ ಅಂತರ ಮಾಯಾ!

ಲಿಂಗಸುಗೂರು.ಮೇ.೦೧-ಪುರಸಭೆ ವ್ಯಾಪ್ತಿಯಲ್ಲಿ ನಡೆದ ಶನಿವಾರದ ಸಂತೆಯಲ್ಲಿ ಸಾಮಾಜಿಕ ಅಂತರ ಮಾಯವಾಗಿದೆ ಇದರಿಂದಾಗಿ ಕೊರೋನಾ ಪಟ್ಟಣದಲ್ಲಿ ನಿಯಂತ್ರಣಕ್ಕೆ ಬಾರದೆ ಪರಿಸ್ಥಿತಿ ನಿರ್ಮಾಣವಾಗಿದೆ. ಏ.೨೮ ರಿಂದ ೧೪ ದಿನಗಳ ಲಾಕ್‌ಡೌನ್ ಘೊಷಿಸಿದ್ದರು ನಿಯಮ ಪಾಲಿಸದ ಜನತೆ ಮೈಮರೆತು ದಿನ ದಿಂದ ಸಂಖ್ಯೆ ಹೆಚ್ಚಾಗಿದೆ.
ಗುಂಪು ಗುಂಪಾಗಿ ಸೇರುತ್ತಿದ್ದು ಸೊಂಕು ಹೆಚ್ಚಾಗಿರುವದು ಈಗಾಗಲೇ ೭೨೭ ಪ್ರಕರಣ ಬೆಳಕಿಗೆ ಬಂದಿದೆ ಈ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೆ ಇಂದಿನ ಶನಿವಾರದ ಸಂತೆ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಹಾಗೂ ಸ್ಥಳೀಯ ಸಂತೆಯಲ್ಲಿ ಕಂಡುಬರುತ್ತದೆ ಬೆಳಿಗ್ಗೆ ೧೦ ೩೦ ಗಂಟೆಯಾದರು ಯಾವೊಬ್ಬ ಪುರಸಭೆ ಅಧಿಕಾರಿಗಳು ಕಾಣದಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ರವರು ಪ್ರತಿಯೊಂದು ಹಂತದಲ್ಲೂ ಕಾನೂನು ಎಂದು ಸಾರ್ವಜನಿಕರು ಯಾಮಾರಿಸಿ ಇಂದು ಸಂತೆಯಲ್ಲಿ ಸಾಮಾಜಿಕ ಅಂತರ ಮಾಯೆವಾಗಿದೆ ನಿಮ್ಮ ಕಾನೂನು ಎಲ್ಲಿ ಮಾಯವಾಗಿ ಹೋಯ್ತು ಎಂದು ಈ ಮೂಲಕ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಲಿಂಗಸುಗೂರು ಪುರಸಭೆ ೨೩ ವಾರ್ಡ್‌ನಲ್ಲಿ ಕಂಡುಬರುವ ಸ್ವಚ್ಚತೆ ಇಲ್ಲದೆ ಇರುವುದು ಬಹುತೇಕ ವಾರ್ಡ್‌ಗಳಲ್ಲಿ ಕಂಡು ಬರುತ್ತದೆ.
ಸೊಂಕಿತರ ಓಡಾಟಕ್ಕೆ ಬ್ರೇಕ್ ಹಾಕುವರು ಯಾರು ಎಂಬ ಪ್ರಶ್ನೆಗೆ ಉತ್ತರ ನಿಡುವರುಯಾರು? ಪಟ್ಟಣದಲ್ಲಿ ದಿನ ನಿತ್ಯ ಸೊಂಕಿತರ ಸಂಖ್ಯೆ ಹೆಚ್ಚುತ್ತಿದೆ. ಪುರಸಭೆ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಬೇಕಾಬಿಟ್ಟಿ ಯಾಗಿ ಕೇಲಸ ಮಾಡುವ ಪುರಸಭೆ ಮುಖ್ಯಾಧಿಕಾರಿ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನಿಡುವರು ಯಾರು ಎಂದು ಬಿದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮೈಬೂಬಪಾಶ, ರವರು ಅಧಿಕಾಕಾರಿಗಳ ವಿರುದ್ಧ ಜಿಲ್ಲಾಧಿಕಾರಿ
ಗಳಿಗೆ ದೂರು ನೀಡಲು ಮುಂದಾಗಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈಗಿರುವ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರ ತಂಡ ಕೆವಲ ದಂಡ ವಸೂಲು ಮಾಡಲು ಮುಂದಾಗಿದ್ದಾರೆ.
ಕೊವಿಡ್ ತಡೆಗಟ್ಟಲು ಪುರಸಭೆ ವತಿಯಿಂದ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇರುವುದು ಪಟ್ಟಣದಲ್ಲಿ ಕೊವೀಡ್ ಸಂಖ್ಯೆ ಹೆಚ್ಚಾಗಿ ಹರಡುತ್ತಿದ್ದರು ಕೂಡ ಕ್ಯಾರೇ ಎನ್ನದ ಪುರಸಭೆ ಅಧಿಕಾರಿಗಳು ಕೊವಿಡ್ ಸಂಖ್ಯೆ ಹೆಚ್ಚಾಗಿ ಸಮುದಾಯಕ್ಕೆ ಹರಡಿದರೆ ಯಾರು ಹೊಣೆಗಾರರು ಎಂದು ಸಾರ್ವಜನಿಕರು ಪ್ರಶ್ನಿಸುವಂತೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಅಧಿಕಾರಿಗಳ ಆಡಳಿತ ವ್ಯವಸ್ಥೆ ವಿರುದ್ಧ ಪ್ರಶ್ನೆ ಮಾಡುವಂತಾಗಿದೆ.
ಲಿಂಗಸುಗೂರು ಪುರಸಭೆ ಕಛೇರಿಗೆ ಇಂತಹಾ ಅಧಿಕಾರಿಗಳು ಬೆಕಿತ್ತಾ ಇವರು ಬಂದಾಗಿನಿಂದ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ವಿರುದ್ಧ ಒಂದುದಿಲ್ಲಾ ಒಂದು ವಿಷಯದಲ್ಲಿ ಜಿಲ್ಲಾಧಿಕಾರಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರು ದೂರು ನಿಡಿದರು. ಯಾವುದೆ ಪ್ರಯೋಜವಾಗಲಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕೂಡಲೇ ಇಂತಹ ಅಧಿಕಾರಿಗಳನ್ನು ಅಮಾನತು ಮಾಡಿ ಆಡಳಿತ ವ್ಯವಸ್ಥೆಗೆ ದಕ್ಷ ಅಧಿಕಾರಿಯನ್ನು ತರಬೇಕು ಇಲ್ಲವಾದರೆ ಪುರಸಭೆ ಮಾನ ಹಾರಾಜು ಹಾಕುವುದು ಗ್ಯಾರಂಟಿ ಎಂದು ಮೈಬೂಬಪಾಶ
ಇವರು ಶನಿವಾರದಂದು ಪತ್ರಿಕೆ ಮೂಲಕ ಜೀಲ್ಲಾದೀಕಾರಿಗಳಿಗೆ ಒತ್ತಾಯಿಸಿದ್ದಾರೆ.