ಸಂತೆಬೆನ್ನೂರು ಫೈಜ್ನಟ್ರಾಜ್ ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆ

ಸಂಜೆವಾಣಿ ವಾರ್ತೆ

ದಾವಣಗೆರೆ. ಜು.೨೨; ಸಂತೆಬೆನ್ನೂರು ಗ್ರಾಮ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ಜುಲೈ 29 ಮತ್ತು 30 ರಂದು ವಿಜಯಪುರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಅಖಿಲಭಾರತ ಸಾಹಿತ್ಯ ಸಮ್ಮೇಳನದಲ್ಲಿ ನ ಕವಿಗೋಷ್ಠಿಗೆ ದಾವಣಗೆರೆಯ ಪ್ರತಿನಿಧಿ ಕವಿಯಾಗಿ ಆಯ್ಕೆ ಆಗಿದ್ದು ಆ ಪ್ರಧಾನ ಕವಿಗೋಷ್ಠಿಯಲ್ಲಿ ತಮ್ಮ ಕವಿತೆ ವಾಚಿಸಲಿದ್ದಾರೆ.ಈ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಕಲಬುರಗಿಯ ಹಿರಿಯ ಸಾಹಿತಿ ಪ್ರೊ. ಎಚ್ ಟಿ ಪೋತೆ ಆಗಿದ್ದಾರೆಕವಿಗೋಷ್ಠಿಯ ಅಧ್ಯಕ್ಷತೆ ಬೆಂಗಳೂರಿನ ಕವಿ ಡಾ. ಟಿ ಎಲ್ಲಪ್ಪ ವಹಿಸಿದ್ದು ಆಶಯ ನುಡಿ ಬಳ್ಳಾರಿಯ ಕವಿ ಡಾ.ಆರಿಫ್ ರಾಜಾ ಆಡಲಿದ್ದಾರೆಫೈಜ್ನಟ್ರಾಜ್ ಈಗಾಗಲೆ ಒಂಭತ್ತು ಕೃತಿ ಪ್ರಕಟಿಸಿದ್ದು ಹತ್ತು ಹಲವಾರು ಪ್ರಶಸ್ತಿ ಪಡೆದಿದ್ದಾರೆಇವರ ಒಂದು ಸಣ್ಣ ಕತೆ ಮಹಾರಾಷ್ಟ್ರ ಶಿಕ್ಷಣ ಇಲಾಖೆಯ ಏಳನೇ ತರಗತಿಗೂ , ಒಂದು ಪದ್ಯ ದಾವಣಗೆರೆ ವಿ.ವಿ ಗೂ ಪಠ್ಯವಾಗಿದೆ. ದಾವಣಗೆರೆ ಪ್ರತಿನಿಧಿಸಿ ಕವಿಗೋಷ್ಠಿಗೆ ಹಾಜರಾಗುತ್ತಿರುವ  ಇವರಿಗೆ ಗ್ರಾಮಸ್ಥರು, ಮಾಸದ ಮಾತು ಬಳಗ, ತಾಲೂಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.