ಸಂತೆಬೆನ್ನೂರು ಕಾಲೇಜಿನಲ್ಲಿ ರಕ್ತದಾನ‌ಶಿಬಿರ

ಸಂಜೆವಾಣಿ ವಾರ್ತೆ

ದಾವಣಗೆರೆ. ಮೇ.೨೫; ಸಂತೆಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ಕ್ರಾಸ್ ಘಟಕದ ವತಿಯಿಂದ  ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು  ಹಾಗೂ ಕಾಲೇಜಿನ ಪ್ರಾಧ್ಯಾಪಕರುಗಳು ರಕ್ತದಾನ ಮಾಡಿದರು. ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ  ಗಿರಿ ಸ್ವಾಮಿ ಎಚ್  ಅಧ್ಯಕ್ಷತೆಯಲ್ಲಿ ರೆಡ್ ಕ್ರಾಸ್ ಘಟಕದ ಸಂಚಾಲಕವಾದ  ಪ್ರಸನ್ನ ಎಂ ರೇವಣಕರ್, ಐ ಎಸ್ ಸಿಘಟಕದ ಸಂಚಾಲಕರಾದ  ರಾಜಶೇಖರ್ ಮುಳಿಮನಿ , ಕಾಲೇಜಿನ ಅಧೀಕ್ಷಕರಾದ ಮೃತ್ಯುಂಜಯ ಹಿರೇಮಠ, ಎನ್ಎಸ್ಎಸ್ ಸಂಚಾಲಕ ಪುನೀತ್ ಕುಮಾರ್, ರೇಂಜರ್ಸ್ ರೋವರ್ಸ್ ಘಟಕದ ಸಂಚಾಲಕರಾದ  ಮಮತಾ ಎನ್ ಆರ್ ಮತ್ತು ಶ್ರೀಮತಿ ನಾಗರತ್ನ ಎಚ್ ಎo ಯತೀಶ್ ಎ ಹಾಗೂ ಎಲ್ಲಾ ಪ್ರಾಧ್ಯಾಪಕರು ಕಚೇರಿ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು