ಸಂತಾನ ಭಾಗ್ಯ ಕರುಣಿಸಿದ ಶರಣಬಸವರು

ಕಲಬುರಗಿ:ಜು.31:ಮಹಾದಾಸೋಹಿ ಶರಣಬಸವೇಶ್ವರರು ತಮಗೆ ಸಂತಾನ ಭಾಗ್ಯ ಕರುಣಿಸಿದ ಪವಾಡವನ್ನು ಕಾಳಗಿಯ ಸರಕಾರಿ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ.ವಿಜಯಲಕ್ಷ್ಮೀ ವಾಲಿ ವಿವರಿಸಿದರು.

ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಾಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಶರಣಬಸವರು ಕಾಮಧೇನು, ಕಲ್ಪವೃಕ್ಷವಾಗಿ ತಮಗೆ ಬೇಡಿದ ಎಲ್ಲವನ್ನೂ ನೀಡಿದ್ದಾರೆ. ತಾವು ಏನಾದರೂ ಸಾಧನೆ ಮಾಡಿದೆನೆಂದರೆ ಅದರಕ್ಕೆ ಶರಣಬಸವರ ಕೃಪಾಶೀರ್ವಾದವಿದೆ. ಚಿಕ್ಕವರಿದ್ದಾಗ ತಮ್ಮ ತಾಯಿ ಶರಣಬಸವರ ಅನೇಕ ಲೀಲೆಗಳನ್ನು ನನಗೆ ತಿಳಿಸಿದ್ದಾರೆ. ಅವರು ದೇವರ ದೇವರು. ಮದುವೆ ಆಗಿ ಏಳು ವರ್ಷವಾದರೂ ಮಕ್ಕಳಾಗಲಿಲ್ಲ. ಆಗ ನಾನು ಶರಣಬಸವೇಶ್ವರರ ಸಾನಿಧ್ಯದಲ್ಲಿ ಬೇಡಿಕೊಂಡು ತಮಗೆ ಮಕ್ಕಳು ದಯಪಾಲಿಸು ದೇವರೆ ಎಂದು ಮೊರೆ ಹೋದೆ. ಅವರ ಆಶೀರ್ವಾದದಿಂದ ನನಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ತಮ್ಮ ತಂದೆ ಉಳಿಯಲಾರದಂತೆ ಆನಾರೋಗ್ಯವಾದಾಗ ತಾಯಿ ಶರಣಬಸವರಲ್ಲಿ ಬೇಡಿಕೊಂಡು ಜೀವನ ಜೀವ ಉಳಿಸಿಕೊಡು ದೇವರೆ ಎಂದು ಶ್ರದ್ಧಾ ಭಕ್ತಿಯಿಂದ ಶರಣರಿಗೆ ಪ್ರಾರ್ಥಿಸಿದಾಗ ಇಂದು ತಂದೆ ಜೀವಂತವಾಗಿದ್ದಾರೆ ಎಂದು ತಮ್ಮ ಜೀವನದಲ್ಲಿ ನಡೆದ ನಿಜ ಘಟನೆ ಹೇಳುವಾಗ ಅವರು ಆನಂದಭಾಷ್ಪರಾದರು. ಇಷ್ಟೇ ಅಲ್ಲದೆ ಎಲ್ಲವೂ ಶರಣಬಸವೇಶ್ವರರ ಆಶೀರ್ವಾದಿಂದ ತಮಗೆ ದೊರೆತಿವೆ. ತಮ್ಮ ಜೀವನದಲ್ಲಿ ಶರಣರ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಮಗೆ ಆದ ಅನೇಕ ವಿಷಯಗಳನ್ನು ತಿಳಿಸಿದರು.