ಸಂತಸ ಹಂಚಿಕೊಂಡ ಪ್ರೀತಿ

ಮುಂಬೈ,ಜ.೧೫- ಬಾಲಿವುಡ್ ನಟಿ ಪ್ರೀತಿ ಜಿಂಟಾ ತಮ್ಮ ಮಕ್ಕಳ ಬಗ್ಗೆ ಸಾಮಾಜಿಕ ಜಾಲಾತಣದಲ್ಲಿ ಸಂತಸದ ವಿಚಾರ ಹಂಚಿಕೊಂಡಿದ್ದಾರೆ.
ನಟಿ ಇತ್ತೀಚೆಗೆ ತನ್ನ ಮಗುವನ್ನು ಪ್ರೀತಿಯಿಂದ ತಬ್ಬಿಕೊಂಡಿರುವ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಫೋಟೊ ಜೊತೆಗೆ ಎರಡು ಹೃದಯದ ಎಮೋಜಿಗಳೊಂದಿಗೆ ‘ಮಮ್ಮಿ ವೈಬ್ಸ್’ ಎಂದು ಬರೆದಿದ್ದಾರೆ.
ಫೋಟೊದಲ್ಲಿ ನಗುಮುಖದಿಂದಿರುವ ಪ್ರೀತಿ, ಹಸಿರು ಪುಲ್‌ಓವರ್ ಧರಿಸಿದ್ದಾರೆ. ಅವರ ಕೈಯಲ್ಲಿರುವ ಚಿಕ್ಕ ಮಗು ಪಿಂಕ್ ಸ್ವೆಟರ್ ಅನ್ನು ಧರಿಸಿರುವುದು ಕಂಡು ಬಂದಿದೆ. ಆದರೆ ಮುಖವನ್ನು ತೋರಿಸಿಲ್ಲ.
೨೦೨೧ರ ನವೆಂಬರ್‌ನಲ್ಲಿ ತಾನು ಮತ್ತು ಪತಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಸ್ವಾಗತಿಸಿರುವುದಾಗಿ ಪ್ರೀತಿ ದಂಪತಿ ತಿಳಿಸಿದ್ದರು. ಆಗ ತಮ್ಮ ಫೋಟೋವನ್ನು ಹಂಚಿಕೊಂಡಿದ್ದ ಅವರು, ಎಲ್ಲರಿಗೂ ನಮಸ್ಕಾರ, ನಾನು ಇಂದು ನಮ್ಮ ಅದ್ಭುತ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.
ಜೀನ್ ಮತ್ತು ನಾನು ತುಂಬಾ ಸಂತೋಷದಿಂದ್ದೇವೆ. ನಮ್ಮ ಟ್ವೀನ್ಸ್‌ಗಳಾದ ಜೈ ಜಿಂಟಾ ಗುಡೆನಫ್ ಮತ್ತು ಜಿಯಾ ಜಿಂಟಾ ಗುಡೆನಫ್ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇವೆ. ಈ ಹೊಸ ಪಯಣದಲ್ಲಿ ಜೊತೆಯಾದ ಎಲ್ಲರಿಗೂ ನಮ್ಮ ಕೃತಜ್ಞತೆಗಳು ಎಂದಿದ್ದಾರೆ.ಬಾಡಿಗೆ ತಾಯ್ತನ ಪ್ರಕ್ರಿಯೆಯಲ್ಲಿ ಸಹಾಯ ಮಾಡಿದ ವೈದ್ಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಗೆ ಪ್ರೀತಿ ಜಿಂಟಾ ಧನ್ಯವಾದ ಸಲ್ಲಿಸಿದ್ದಾರೆ. ಪ್ರೀತಿ ಜಿಂಟಾ ೨೦೧೬ ರಲ್ಲಿ ಅಮೆರಿಕದ ಜೀನ್ ಗುಡೆನಫ್ ಅವರನ್ನು ವಿವಾಹವಾಗಿದ್ದರು.