ಸಂತಸದಾಯಕ ಕಲಿಕೆಗೆ ಕಲಿಕಾ ಸಾಮಗ್ರಿಯಾಧಾರಿತ ಬೋಧನೆ ಅಗತ್ಯ

ಚಿತ್ರದುರ್ಗ.ಮಾ.೨೪; ಮಕ್ಕಳು ಸಂತಸದಾಯಕವಾಗಿ ಕಲಿಯಲು ಕಲಿಕಾ ಸಾಮಗ್ರಿಯಾಧಾರಿತ ಬೋಧನೆ ಅಗತ್ಯ ಎಂದು ಡಯಟ್ ಉಪಪ್ರಾಂಶುಪಾಲ ಡಿ.ಆರ್.ಕೃಷ್ಣಮೂರ್ತಿ ಹೇಳಿದರು. ನಗರದ ಡಯಟ್‌ನಲ್ಲಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಎಲ್.ಕೆ.ಜಿ ಶಿಕ್ಷಕಿಯರಿಗೆ ಆಯೋಜಿಸಿರುವ ಬುನಾದಿ ತರಬೇತಿಯ 3ನೇ ದಿನದ ಕಾರ್ಯಾಗಾರದಲ್ಲಿ ‘ಚಿಲಿಪಿಲಿ’ ತರಬೇತಿ ಸಾಹಿತ್ಯ ವಿತರಿಸಿ ಮಾತನಾಡಿದ ಅವರು ಪೂರ್ವ ಪ್ರಾಥಮಿಕ ಹಂತದಲ್ಲಿ ಕಲಿಕಾ ಸಾಮಗ್ರಿಗಳನ್ನು ಬಳಸಿ ಭಾಷೆ ಮತ್ತು ಅಂಕಿ ಸಂಖ್ಯೆಗಳ ಪರಿಕಲ್ಪನೆಯನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.  ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ಮಾತನಾಡಿ, ಶಿಕ್ಷಕಿಯರು ಮಕ್ಕಳ ಮನಸ್ಸನ್ನು ಅರಿತು ಬೋಧಿಸಬೇಕು. ತರಗತಿಯ ವಾತಾವರಣಕ್ಕೆ ಹೊಂದಿಕೊಳ್ಳುವAತೆ ಕಥೆ, ಶಿಶುಗೀತೆ, ಸಂಭಾಷಣೆ, ಪದ ಜೋಡಣೆ ಮೂಲಕ ಕಥೆ ವಿಸ್ತರಿಸುವುದು, ಸಚಿತ್ರಾಧಾರಿತ ಕಾರ್ಡ್ಗಳನ್ನು ಬಳಸುವುದರಿಂದ ಸುಲಭವಾಗಿ ಕಲಿಯುತ್ತಾರೆ. ತರಬೇತಿಯಲ್ಲಿ ಕಲಿತ ಅಂಶಗಳನ್ನು ತರಗತಿ ಕೋಣೆಯಲ್ಲಿ ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು. ಹಿರಿಯ ಉಪನ್ಯಾಸಕಿ ಎಸ್.ರೇಣುಕಾ, ನೋಡಲ್ ಅಧಿಕಾರಿ ಕೆ.ಜಿ.ಪ್ರಶಾಂತ್, ಉಪನ್ಯಾಸಕ ಎಸ್.ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಉಷಾ, ಕವಿತಾ ಹಾಗೂ ಜಿಲ್ಲೆಯ ಎಲ್.ಕೆ.ಜಿ.ಶಿಕ್ಷಕಿಯರು ಉಪಸ್ಥಿತರಿದ್ದರು.