ಸಂತರ ಸದ್ಭೋದೆಯಿಂದ ಜೀವನ ಪಾವನ: ಅನುಪಮಾ ಪಿ.

ವಿಜಯಪುರ:ಮಾ.19:ಒಂದು ಕಾಲದಲ್ಲಿ ವಹಿವಾಟು ಮಾಡಿಕೊಂಡು ಶ್ರೀಮಂತ ಜೀವನ ನಡೆಸಿದ್ದ ಲಂಬಾಣಿ ಜನಾಂಗ ಕಾಲಾಂತರದಲ್ಲಿ ಕಾಡು ಸೇರಿ ಪಶುಪಾಲನೆ ಮಾಡತೊಡಗಿದರು. ಕಷ್ಟ ನಷ್ಟಗಳನ್ನು ಅನುಭವಿಸುತ್ತ ಆರ್ಥಿಕವಾಗಿ ದುರ್ಬಲರಾದರು ಸಮುದಾಯದ ಉದ್ದಾರಕ್ಕಾಗಿ ಸಂತ ಸೇವಾಲಾಲರು ಅವತಾರವೆತ್ತಿ ಬಂದರು. ಜನರ ದುರಭ್ಯಾಸ ಮತ್ತು ಮೂಢನಂಬಿಕೆಗಳನ್ನು ನಿರ್ಮೂಲನಗೊಳಿಸಲು ಊರೂರು ಅಲಿದರು. ಅವರ ತತ್ವಗಳನ್ನು ಅಳವಡಿಸಿಕೊಂಡು ಬದುಕಿನಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳಬೇಕೆಂದು ಶಿಕ್ಷಕ ಸಾಹಿತಿಗಳಾದ ಅನುಪಮಾ ಪಿ. ಅವರು ಹೇಳಿದರು.
ಇನ್ನೊರ್ವ ಸಾಹಿತಿಗಳಾದ ಜಂಬುನಾಥ ಕಂಚ್ಯಾಣಿ ಅವರು ಶರಣ ಸಂಸ್ಕøತಿ ಬಗ್ಗೆ ಮಾತನಾಡಿದರು. ಜಾಗತೀಕ ವ್ಯಾಪಾರೀಕರಣದಿಂದಾಗಿ ನಮ್ಮ ಯುವಕರು ಪಾಶ್ಚಮಾತ್ಯ ಸಾಂಸ್ಕøತಿಯ ಆಕರ್ಷಗೆ ಒಳಗಾಗಿದ್ದರೆ. ಸದಾ ಮೊಬೈಲನಲ್ಲಿ ಆಟವಾಡುತ್ತ ಶರಣ ಸಂಸ್ಕøತಿಯನ್ನು ಮರೆತಿದ್ದಾರೆ ಎಂದು ಹೇಳಿದರು.
ಅವರು ವಿಜಯಪುರ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಮತ್ತು ಬಂಜಾರ ಶಿಕ್ಷಣ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿದರು. ಲಿಂಗೈಕ್ಯ ರುದ್ರಮ್ಮ ದಾನಪ್ಪ ಹಲಕುಡ ಮತ್ತು ಸಂತ ಸೇವಾಲಾಲರ ಸ್ಮರಣಾರ್ಥ ನಡೆದ ದತ್ತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ರಾಘವೇಂದ್ರ ತದ್ದೇವಾಡಿ ವಹಿಸಿದ್ದರು.
ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಾಹೇಬಗೌಡ ಬಸರಕೋಡ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದಲ್ಲಿಯ ಅಂಕುಡೊಂಕುಗಳನ್ನು ಸರಿಪಡಿಸಲು ಶರಣ ಸಾಹಿತ್ಯವು ಒಂದು ದಿವ್ಯ ಔಷಧಿಯಾಗಿದೆ. ಶರಣ ಚಿಂತನೆಗಳನ್ನು ಮನೆ ಮನಗಳಿಗೆ ಮುಟ್ಟುವಂತೆ ಪರಿಷತ್ತು ತನ್ನ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಾಸೋಹಿಗಳಾದ ಇಂದುಮತಿ ಲಮಾಣಿ, ವಿಜಯಕುಮಾರ ಹಲಕುಡೆ, ಎನ್.ಎಸ್. ಜಾಧವ, ಎಚ್.ಎಂ. ಕುಂಬಾರ, ಟಿ.ಬಿ. ಪವಾರ, ವಿಜಯ ಚವ್ಹಾಣ, ಸಂಗೀತಾ ಪವಾರ, ಶಿವಕುಮಾರ ಮಾಳಗಿ, ಸಂತೊಷ ಚವ್ಹಾಣ, ಮುಂತಾದವರು ಉಪಸ್ಥಿತರಿದ್ದರು.
ಸ್ವಾತಿ ರಾಠೋಡ ಸ್ವಾಗತಿಸಿದರು. ಹಸನ ಪಟೇಲ ನಿರೂಪಿಸಿದರು. ಶಂಕರ ಲಡಂಗಿ ವಂದಿಸಿದರು.