ಸಂತಕವಿ ಸರ್ವಜ್ಞ ಜಯಂತಿ ಆಚರಣೆ

ಕೊಲ್ಹಾರ:ಫೆ.21: ಸರ್ವ ಕಾಲಕ್ಕೂ ತ್ರಿಪದಿ ಸರ್ವಜ್ಞನ ವಚನಗಳು ಪ್ರಸ್ತುತ ಅವರ ಆದರ್ಶ ಗುಣಗಳು, ಸರ್ವಜ್ಞನ ವಚನಗಳು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ಸಾಗಬೇಕು ಎಂದು ಮಹಾನಂದ ಕುಂಬಾರ ಹೇಳಿದರು
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಂತಕವಿ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ನಾಗರಾಜ ಕುಂಬಾರ ಮಾತನಾಡುತ್ತಾ ತ್ರಿಪದಿ ಬ್ರಹ್ಮ ಸರ್ವಜ್ಞ ಅವರ ವಚನಗಳಲ್ಲಿ ಬದುಕಿನ ಸತ್ಯದ ಜತೆಗೆ ಸಾಮಾಜಿಕ ಸಮಾನತೆಯ ಸಾರವಿದೆ ಆಧುನಿಕ ವೇಗದ ಜಗತ್ತಿನಲ್ಲಿ ಸರ್ವಜ್ಞರ ವಚನಗಳು ಆದರ್ಶವಾಗಿವೆ ಇಂದಿನ ಯಾಂತ್ರಿಕ ಬದುಕಿನಲ್ಲಿ ದೀರ್ಘಾವಧಿಯ ಸಾಹಿತ್ಯವನ್ನು ಓದಿ ಬದುಕನ್ನು ಬದಲಾಯಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಆದರೆ ಸರ್ವಜ್ಞ, ಬಸವಣ್ಣನಂತಹ ವಚನಕಾರರ ಸರಳ ವಚನಗಳಿಂದ ಬದುಕನ್ನು ತಿದ್ದಿಕೊಳ್ಳುವುದು ಸುಲಭದ ಮಾರ್ಗವಾಗಿದೆ. ಯಾವ ಸಾಹಿತ್ಯ ಸರಳವಾಗಿ, ಸಹಜವಾಗಿ ಜನಸಾಮಾನ್ಯರಿಗೆ ಅರ್ಥವಾಗುತ್ತದೋ ಅದು ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ ಎಂದರು

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಗುರಪ್ಪ ಕುಂಬಾರ ಚನ್ನಪ್ಪ ಕುಂಬಾರ ಮಲ್ಲಿಕಾರ್ಜುನ ಕುಂಬಾರ ದಯಾನಂದ್ ಕುಂಬಾರ ಕುಮ್ಮಪ್ಪ ಕುಂಬಾರ ಜಗದೀಶ್ ಕುಂಬಾರ ಶಂಕರ ಕುಂಬಾರ ಶ್ರೀಶೈಲ್ ಕುಂಬಾರ ಅರುಣ್ ಕುಂಬಾರ ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.