ಸಂಡೇ ಸಂಪೂರ್ಣ ಸ್ತಬ್ದ್‍ವಾದ ಶಹಾಬಾದ

ಶಹಾಬಾದ್:ಎ.25: ರಾಜ್ಯದಲ್ಲಿಯೇ ಮೊದಲ ಸಿಮೆಂಟ್ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಹಾಬಾದ್ ನಗರ ವಾರಾಂತ್ಯ ಕಪ್ರ್ಯೂನಿಂದ ಸಂಡೇ ಸಂಪೂರ್ಣ ಸ್ತಬ್ದ್‍ವಾಗಿ ಕಂಡು ಬಂತು.

ಜನಜಂಗುಳಿಯಿಂದ ತುಂಬಿ ತುಳುಕಾಡುತ್ತಿದ್ದ ನಗರದ ಬಸ್‍ಸ್ಟಾಂಡ್, ರೇಲ್ವೇ ಗೇಟ್, ಮಾರುಕಟ್ಟೆ ಪ್ರದೇಶ ಜನರಿಲ್ಲದೇ ಬೀಕೋ ಎನ್ನುತ್ತಿತ್ತು. ಮೇಡಿಕಲ್ ಶಾಫ್, ಹಾಲು, ದಿನಸಿ ಅಂಗಡಿಗಳನ್ನು ಹೊರತು ಪಡಿಸಿ ಯಾವ ಅಂಗಡಿಗಳು ತೆರೆಯಲ್ಲಿಲ್ಲ. ವಾಹನ ಓಡಾಟವು ಕಂಡು ಬರಲ್ಲಿಲ್ಲ. ಜನರು ಬೀದಿಗಿಳಿಯದೇ ಮನೆಯಲ್ಲಿಯೇ ಇದ್ದು ತಾಲ್ಲೂಕಾಡಳಿತ ಘೋಷಿಸಿದ ಕಟ್ಟುನಿಟ್ಟಿನ ಕ್ರಮಕ್ಕೆ ಜನರು ಸಹಕಾರ ನೀಡಿದರು.

ಬೆಳಗ್ಗೆ ಪೋಲೀಸರ್ ಸೈರನ್ ವಾಹನಕ್ಕೆ ಜನರು ಮನೆಯಿಂದ ಹೋರಗಡೆ ಬರುವ ಮನಸೇ ಮಾಡಲ್ಲಿಲ್ಲ. ರಸ್ತೆಗಿಳಿದ ಜನರಿಗೆ ಪೋಲಿಸ್‍ರು ಮನೋವೋಲಿಸಿ ಮನೆಯಲ್ಲಿಯೇ ಇರೀ ಎಂದು ಕಳಿಸಿದರು. ಕೆಲವರು ನೆಪ ಹೇಳಿ ತಪಿಸಿಕೊಂಡ ಪ್ರಸಂಗ್‍ಗಳು ನಡೆದವು. ಶುಕ್ರವಾರ ನಗರಕ್ಕೆ ಎಸಿ ರಮೇಶ ಕೋಲಾರ ಭೇಟಿ ನೀಡಿ ಕಠಿಣ ನಿಯಮ ಪಾಲಿಸುವಂತೆ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಆದೇಶ ನೀಡಿದರು. ಅದರಂತೆ ತಹಸೀಲ್ದಾರ್ ವರ್ಮಾ ಜನರನ್ನು ಮನೆಯಿಂದ ಹೋರಬರದಂತೆ ಮನ್ನೆಚ್ಚರಿಕೆ ಕ್ರಮ ವಹಿಸಿದರು.