ಸಂಡೇ ಖರ್ಚಿಗಾಯ್ತು ಮತ್ತೇ… ಮುಂದೇನು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,8- ಚುನಾವಣೆಯ ಹಬ್ಬದ ಹಿನ್ನಲೆಯಲ್ಲಿ ನಿನ್ನೆ ಕಂಪ್ಲಿ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ  ಅಭ್ಯರ್ಥಿಗಳು ಮತದಾರರಿಗೆ  ಸಂಡೇ ಮಜಾ ಮಾಡಿಸಿದ್ದಾರಂತೆ. ಮುಂದೆನು ಎಂಬ ಪ್ರಶ್ನೆಯಲ್ಲಿ ಇಂದು ಕಾದು ಕುಳಿತಿದ್ದಾರಂತೆ.
ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವೊಲಿಸಲು ಬೂತ್ ಮುಖಂಡರು‌ಮಾಡಿದ ಪ್ರಯತ್ನವಂತೆ ಇದು.
ಬೂತ್ ಖರ್ಚಿಗೆಂದು ಕೊಟ್ಟಿದ್ದನ್ನೇ ಒಟ್ಟಾಗಿಸಿ. ಮನೆ ಮನೆಗೆ ಎರಡು ಇಲ್ಲ ಮೂರು ನೂರುಗಳನ್ನು ಎರಡೂ ಕೈ ಮತ್ತು ಹೂ  ಪಕ್ಷದವರು ಮಾಡಿದ್ದಾರಂತೆ.
ಇದರಿಂದ ನಿನ್ನೆ ದಿನ ನಾನ್ ವೆಜ್ ಪ್ರಿಯರ ಮನೆಯಲ್ಲಿ ಕೋಳಿಗಳ ಕೇಳಿಸಿದೆಯಂತೆ. ವೆಜ್ ಪ್ರಿಯರ ಮನೆಯಲ್ಲಿ ಒಗ್ಗರಣೆ ಮುರ್ಚಿಯ ಘಮ ಘಮ ವಾಸನೆ ಬಂದಿದೆಯಂತೆ.
ಇಂದು ಮತ್ತೇನು ಎಂದು ಕಾದು‌ ಕುಳಿತಿರುವ ಮತದಾರ ಮಕ್ಕಳ ಶಾಲೆ ಫೀಜ್ ಗೆ, ಕರೆಂಟ್ ಬಿಲ್ ಬಾಕಿಗೆ,  ಕೈಗಾಡ ತಗೆದುಕೊಂಡಿದ್ದನ್ನು ತಿರುಗಿಸಿ ಕೊಡಲೆಂದು ಲೆಕ್ಕಾಚಾರದಲ್ಲಿ ತೊಡಗಿದ್ದು ಅದಕ್ಕೆ ಅಭ್ಯರ್ಥಿಗಳ ಚುಕ್ತ ಏನಾಗುತ್ತೋ ಕಾದು ನೋಡಬೇಕಿದೆ. ಗ್ರಾಮೀಣದಲ್ಲಿ ಕೈ ಒಂದು, ಹೂ ಎರಡು ಎಂದರೆ.
ನಗರದಲ್ಲಿ ಹೂ  ಒಂದು, ಫುಟ್ಬಾಲ್ ಎರಡು ಎಂದಿದೆ ಕೈ ನವರು ಮೂರು ಮಾಡಿದ್ದಾರಂತೆ.