ಸಂಡೂರು 49 ಕೆ.ಜಿ. ಗಾಂಜಾ ವಶ

ಸಂಡೂರು ನ:18 ತಾಲೂಕಿನ ಎಂ. ಗುಂಡ್ಲ ಹಳ್ಳಿಯಿಂದ ಬಸಾಪುರಕ್ಕೆ ಹೋಗುವ ಮಾರ್ಗದ ದೇವಣ್ಣ ಹಾಗೂ ಬಾಲಯ್ಯ ಎನ್ನುವವರ ಮೆಣಸಿಕಾಯಿ, ಹತ್ತಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ 49 ಕೆ.ಜಿ. ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆಯವರು ವಶಪಡಿಸಿಕೊಂಡಿದ್ದು, 49ಕೆ.ಜಿ. ಗಾಂಜಾದ ಮೌಲ್ಯದ ಬೆಲೆ 7.20 ಲಕ್ಷ ಎಂದು ಅಂದಾಜಿಸಲಾಗಿದೆ. ಸಂಡೂರಿನ ಅಬಕಾರಿ ಸಹಾಯಕ ನಿರೀಕ್ಷಿಕೆ ಸಿ. ಜ್ಯೋತಿಬಾಯಿ ನೇತೃತ್ವದಲ್ಲಿ ಹುರುಕುಂದಪ್ಪ, ಜಿ.ಆರ್. ರಾಘವೇಂದ್ರ, ರೆಹೆಮಾನ್ ಸಾಬ್, ಮಲ್ಲಿಕಾರ್ಜುನ ಪ್ರಸನ್ನ ತಂಡಗಳು ಕಾರ್ಯಾಚರಣೆ ನಡೆಸಿದೆ. ವಿಚಾರ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದು, ಹೊಲದ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.