
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಜಿಲ್ಲೆಯ ಸಂಡೂರು ಕ್ಷೇತ್ರದಲ್ಲಿ ಹಾಲಿ ಶಾಸಕ, ಈ ತುಕರಾಂ ಅವರು ಸತತ ನಾಲ್ಕನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ.
ಇದು ನಿರೀಕ್ಷೆಯಲ್ಲಿತ್ತು.
ಬಿಜೆಪಿಯ ಶಿಲ್ಪ ರಾಘವೇಂದ್ರ ಅವರನ್ನು.. ಮತಗಳ ಅಂತರದಿಂದ ಸೋಲಿಸಿದ್ದಾರೆ.
ಬಿಜೆಪಿ ಟಿಕೆಟ್ ಸಿಗದೇ ಕೆಆರ್ ಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಕೆ.ಎಸ್.ದಿವಾಕರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು.
ಸಂತೋಶ್ ಲಾಡ್ ಈ ಕ್ಷೇತ್ರದಲ್ಲಿ ತಮ್ಮ ಶಿಷ್ಯ ತುಕರಾಂ ಮೂಲಕ ಮತ್ತೆ ಹಿಡಿತ ಸಾಧಿಸಿದಂತಾಗಿದೆ. ಕಾರ್ತಿಕ್ ಘೋರ್ಪಡೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಮಾಡಿದ ಪ್ರಯತ್ನ ಮತ್ತೆ ವಿಫಲವಾಗಿದೆ. ನೇರ ಹಣಾಹಣಿ ಇದ್ದರೆ ತುಕರಾಂ ಅವರಿಗೆ ಕಷ್ಟ ಸಾಧ್ಯವಿತ್ತು.