ಸಂಡೂರು ಶ್ರೀ ಕರಿಬಸವೇಶ್ವರರ ಪಲ್ಲಕ್ಕಿ ಉತ್ಸವ

ಸಂಡೂರು:ಮಾ:14 ಭಕ್ತಿಯ ಮಾರ್ಗದಲ್ಲಿ ಸಾಗುವ ಪ್ರತಿಯೊಬ್ಬರೂ ಸಹ ಮುಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ, ಇಂದು ಅ ಭಾವನೆ ಇಲ್ಲವಾಗುತ್ತಿದ್ದು ಭಕ್ತಿ ಬದುಕಿನ ಬಹುಮುಖ್ಯವಾದ ಭಾಗವಾಗಿದೆ ಎಂದು ಶ್ರೀ ಕರಿಬಸವೇಶ್ವರ ದೇವಸ್ಥಾನದ ಮುಖ್ಯಸ್ಥರಾದ ನಿಂಗಪ್ಪಜ್ಜ ತಿಳಿಸಿದರು.
ಅವರು ಪಟ್ಟಣದ ಶ್ರಿ ಹುಲಿಗೆಮ್ಮ ದೇವಸ್ಥಾನದಿಂದ ಗಂಗೆಯನ್ನು ತರುವ ಕಾರ್ಯಕ್ರಮ ಹಾಗೂ 24ನೇ ವರ್ಷದ ಶ್ರೀ ಕರಿಬಸವೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಸಂಡೂರಿನ ಸರ್ವಭಕ್ತಾದಿಗಳ ಸಹಕಾರ ಮತ್ತು ಭಕ್ತಿಯ ಮಾರ್ಗದ ಅಂಗವಾಗಿ ಕಳೆದ 23 ವರ್ಷಗಳಿಂದಲೂ ಸಹ ಶ್ರೀ ಕರಿಬಸವೇಶ್ವರ ದೇವಸ್ಥಾನ ಸಮಿತಿಯವತಿಯಿಂದ ಸಾಮೂಹಿಕ ವಿವಾಹ ಮತ್ತು ಪಲ್ಲಕ್ಕಿ ಉತ್ಸವ, ವಿಶೇಷಪೂಜಾ ಕಾರ್ಯಕ್ರಮಗಳನ್ನು ಶಿವರಾತ್ರಿಯ ಅಮವಾಸ್ಯೆಯಂದು ಹಮ್ಮಿಕೊಳ್ಳಲಾಗುತ್ತಿದೆ, ಈ ವರ್ಷವೂ ಸಹ ಹಮ್ಮಿಕೊಂಡಿದ್ದು, ಸಾಮೂಹಿಕ ವಿವಾಹಗಳನ್ನು ಕರೋನಾ ಅಂಗವಾಗಿ ತಡೆದು ಬರೀ ಪಲ್ಲಕ್ಕಿ ಉತ್ಸವ ಮತ್ತು ವಿಶೇಷ ಪೂಜಾಕಾರ್ಯಕ್ರಮಗಳನ್ನು ನಡೆಸಲಾಯಿತು, ಕಾರ್ಯಕ್ರಮಕ್ಕೆ ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿಗಳ ಕೃಪಾಶ್ರೀರ್ವಾದ ಮತ್ತು ಉತ್ತಂಗಿ ಶ್ರೀಗಳ ಕೃಪೆಯಿಂದ ಈಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಸರ್ವ ಸದ್ಭಕ್ತರೂ ಸಹ ಇದಕ್ಕೆ ಪ್ರೇರಣೆಯಾಗಿದ್ದಾರೆ.
ಭಕ್ತರು ಬೆಳಗಿನಿಂದಲೇ ಶ್ರೀ ಕರಿಬಸವೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ, ವಿಶೇಷವಾದ ಪೂಜೆಗಳನ್ನು ನೆರವೇರಿಸಿದರು, ನಂತರ ಶ್ರೀ ಹುಲಿಗೆಮ್ಮ ದೇವಸ್ಥಾನದಿಂದ ಗಂಗೆಯನ್ನು ತರುವ ಮೂಲಕ ಗಂಗಾದೇವಿಯ ಪ್ರತಿಷ್ಠಾಪನೆಯನ್ನು ನೆರವೇರಿಸಿ ಪೂಜೆ ಸಲ್ಲಿಸಲಾಯಿತು, ಅಲ್ಲದೆ ಸ್ವಾಮಿಯ ಪಲ್ಲಕ್ಕಿಯನ್ನು ಸರ್ವ ಅಲಂಕೃತಗೊಳಿಸಿ ಪಲ್ಲಕ್ಕಿ ಉತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಅಲ್ಲದೆ ಸರ್ವ ಸದ್ಭಕ್ತರು ಸಾಮೂಹಿಕವಾಗಿ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.