ಸಂಡೂರು ವಿಧಾನ ಸಭಾ ಕ್ಷೇತ್ರಅಲುಗಾಡದ ಕೈ ಕೋಟೆಅರಳಲಾಗದೆ ಒದ್ದಾಡುತ್ತಿರುವ ಕಮಲಗೋಲ್ ಗಾಗಿ ಯತ್ನಿಸುತ್ತಿರುವ ಫುಟ್ಬಾಲ್


ಎನ್.ವೀರಭದ್ರಗೌಡ
ಬಳ್ಳಾರಿ:ಮೇ,7- ಕಾಂಗ್ರೆಸ್ ನ ಭದ್ರಕೋಟೆ ಸಂಡೂರು ಕ್ಷೇತ್ರವನ್ನು ಈ ಬಾರಿಯೂ ಅಲು್ಅಡಿಸುವ ಶಕ್ತಿಯನ್ನು ಪ್ರತಿ ಸ್ಪರಗಧಿಗಳು ಪಡೆದಂತೆ ಕಂಡು ಬರುತ್ತಿಲ್ಲ. ಹಾಲಿ ಶಾಸಕ ತುಕರಾಂ ಅವರ ಗೆಲುವಿನ ಓಟಕ್ಕೆ  ಬ್ರೇಕ್ ಹಾಕುವಷ್ಟು ಶಕ್ತಿಯನ್ನು ಕಮಲದ ಮಹಿಳಾ ಅಭ್ಯರ್ಥಿ ಶಿಲ್ಪ ಅವರಾಗಲಿ, ಫುಟ್ಬಾಲಿನ ದಿವಾಕರ್ ಆಗಲಿ ಪಡೆದಂತೆ ಕಂಡು‌ಬರುತ್ತಿಲ್ಲ.
ಬಿಜೆಪಿ ಅಭ್ಯರ್ಥಿ ಹೊಸ ಮುಖ, ಮಹಿಳೆಯಾಗಿದ್ದರೂ, ಕಾಂಗ್ರೆಸ್ ಗೆ ನೇರವಾಗಿ ಬಿಜೆಪಿಯೊಂದೇ ಆಗಿದ್ದರೆ ಕೈ ಬಲ ಅಲುಗಾಡುತ್ತಿತ್ತು. ಆದರೆ ಕೊನೆ ಗಳಿಗೆವರೆಗೆ ಬಿಜೆಪಿ ಟಿಕೆಟ್ ಗಾಗಿ ಕಳೆದ ಹಲವು ವರ್ಷಗಳಿಂದ ಪ್ರಯತ್ನಿಸಿ, ಪಕ್ಷದ ಸಂಘಟನೆ ಮಾಡಿದ್ದ ಕೆ.ಎಸ್.ದಿವಾಕರ್ ಗೆ ಟಿಕೆಟ್ ನಿರಾಕರಣೆ. ಜೊತೆಗೆ ಟಿಕೆಟ್ ಸಿಗದಿದ್ದರೂ ಪಕ್ಷದ ಜೊತೆ ನಿಂತಿದ್ದರೆ ಕೈಗೆ ನಡುಕ ಉಂಟಾಗುತ್ತಿತ್ತು.
ಆದರೆ ಶಿಲ್ಪ ಅವರಿಗೆ ಪಕ್ಷದ, ಕಾರ್ತಿಕ್ ಘೋರ್ಪಡೆ ಅವರ ಆಸಿರ್ವಾದವಷ್ಟೇ ಗೆಲುವಿನ ದಡ ಸೇರಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಇತ್ತ ಕೊನೆವರೆಗೆ ಕೈಗೆ ಪ್ರಬಲ ಸ್ಪರ್ಧೆ ನೀಡಲು ಪ್ರಯತ್ನಿಸಿದ್ದ ದಿವಾಕರ್ ಅವರು ಕೆಆರ್ ಪಿ ಪಕ್ಷದಿಂದ ಫುಟ್ಬಾಲ್ ಆಡುತ್ತಿರುವುದು ಕೈ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಬಹುದೇ ಹೊರೆತು. ತಾವೇ ಗೋಲ್ ಹೊಡೆಯಲು ಯಶಸ್ಸು ಕಾಣುತ್ತಾರ ಎಂಬುದರಲ್ಲಿ ಸ್ಪಷ್ಟತೆ ಕಂಡು ಬರುತ್ತಿಲ್ಲ.
ಜೆಡಿಎಸ್ ನಿಂದ ಕುರೆಕುಪ್ಪ‌ ಸೋಮಪ್ಪ ಸ್ಪರ್ಧೆಯಲ್ಲಿದ್ದಾರಷ್ಟೇ.
ಹೀಗಾಗಿ ಸಂತೋಷ್ ಲಾಡ್ ಬೆಂಬಲ, ಪ್ರಚಾರ, ಸಾಂಪ್ರದಾಯಿಕವಾದ ಕಾಂಗ್ರೆಸ್  ಮತಗಳು, ತುಕರಾಂ ಅವರಿಗೆ ಅಲ್ಲಲ್ಲಿ ಒಂದಿಷ್ಟು ವಿರೋಧಿ ಅಲೆ ಕಂಡರೂ, ಅವರು ಪ್ರತಿ ಹಳ್ಳಿಗೆ ಭೇಟಿ, ಬಗರಹುಕುಂ ಸಾಗುವಳಿಯ ಸರ್ವೇ ಸೆಟಲ್ ಮೆಂಟ್, ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ ಸೇರಿದಂತೆ, ಡಿಎಂಎಫ್ ಫಂಡ್ ನ  ಸಮರ್ಥ ಬಳಕೆ, ಸಜ್ಜನಿಕೆ, ಸರಳತೆ  ಮೊದಲಾದ ಕಾರಣದಿಂದ ಇನ್ನೂ ಜನ ಬೆಂಬಲ ಕಳೆದುಕೊಂಡಂತೆ ಕಂಡು ಬರದ ಕಾರಣ ಮತ್ತೊಮ್ಮೆ ವಿಧಾನಸಭೆ ಪ್ರವೇಶದ ಕನಸು ನನಸಾಗಬಹುದು
ಆದರೆ ಎಲ್ಲವುದನ್ನು ನಿರ್ಧರಿಸುವವರು ಕ್ಷೇತ್ರದ ಮತದಾರರು.  ಅವರು ಮೇ 10 ರಂದು ಒತ್ತುವ ಮತ ಮುದ್ರೆಯೇ ಅಂತಿಮ, ಸ್ಪರ್ಧಿಗಳ ಗೆಲುವಿನ ಹಣೆ ಬರಹ ಆವರ ಕೈ ನಲ್ಲಿಯೇ ಇದೆ ಎನ್ನಬಹುದು.

One attachment • Scanned by Gmail